ಮನೆಯಲ್ಲಿ ವಾಸ್ತು ಪ್ರಕಾರ ಕೋಣೆಗಳು ಯಾವ ಯಾವ ದಿಕ್ಕಿಗೆ ಇರಬೇಕು ಎಂದು ತಿಳಿಬೇಕಾ...?

ಗುರುವಾರ, 18 ಜನವರಿ 2018 (07:59 IST)
ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಮಾತ್ರ ಅಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಇಲ್ಲವಾದಲ್ಲಿ ಮನೆಯಲ್ಲಿ ಒಂದಾಲ್ಲ ಒಂದು ರೀತಿಯಾದ ಸಮಸ್ಯೆಗಳು ಕಾಡುತ್ತಿರುತ್ತದೆ. ಮನೆ ಕಟ್ಟುವ ಮೊದಲು ಮನೆಯ ಕೋಣೆಗಳು ಯಾವ ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ.

 
ಮೊದಲನೆಯದಾಗಿ ಮನೆಯ ಮುಖ್ಯ ದ್ವಾರ ಉತ್ತರ ಅಥವಾ ಪೂರ್ವ ದಿಕ್ಕಿಗೆ ಇರಬೇಕು. ಪೂರ್ವದಿಕ್ಕಿಗೆ ಬಚ್ಚಲು(ಸ್ನಾನದ) ಮನೆ ಇರಬೇಕು, ಅಡುಗೆ ಮನೆ ಆಗ್ನೇಯ ದಿಕ್ಕಿಗೆ, ಶಸ್ತ್ರಗಳನ್ನಿಡುವ ಕೋಣೆ ನೈರುತ್ಯ ದಿಕ್ಕಿಗೆ , ಊಟದ ಮನೆ ಪಶ್ಚಿಮಕ್ಕೆ ಇರಬೇಕು, ಹಸುಗಳಿಗೆ ಕೊಟ್ಟಿಗೆಗಳನ್ನು ನಿರ್ಮಿಸುವುದಾದರೆ ಅದು ವಾಯುವ್ಯ ದಿಕ್ಕಿನಲ್ಲಿ ಕಟ್ಟಬೇಕು. ಚಿನ್ನಾಭರಣಗಳನ್ನು ಸಂಗ್ರಹಿಸಿಡುವ ಕೋಣೆಯನ್ನು ಉತ್ತರ ದಿಕ್ಕಿನಲ್ಲಿ ನಿರ್ಮಿಸಬೇಕು. ಮನೆಯಲ್ಲಿ ದೇವರ ಕೋಣೆಯನ್ನು ಯಾವಾಗಲೂ ಈಶಾನ್ಯ ದಿಕ್ಕಿನಲ್ಲೇ ಕಟ್ಟಬೇಕು. ಮಲಗುವ ಕೋಣೆಗಳು ದಕ್ಷಿಣಕ್ಕೆ ಇರಬೇಕು. ಮನೆಯ ಪೂರ್ವ, ಪಶ್ಚಿಮ, ಉತ್ತರ ಈ ಮೂರರಲ್ಲಿ ಒಂದು ದಿಕ್ಕಿನ ಕಡೆ ಬಾವಿಯನ್ನು ಕಟ್ಟಿಸಿದರೆ ಆ ಮನೆಯಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇಂತಹ ಸರಳ ವಾಸ್ತುವನ್ನು ಅನುಸರಿಸಿ ಮನೆ ಕಟ್ಟಿದರೆ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ