ಗ್ರಹಣದ ಹಿಂದಿನ ದಿನ ನಿಂಬೆಹಣ್ಣಿನಿಂದ ಹೀಗೆ ಮಾಡಿದರೆ ಮನೆಯ ಸಕಲ ದೋಷ ಕಳೆಯುತ್ತೆ

ಬುಧವಾರ, 25 ಡಿಸೆಂಬರ್ 2019 (06:19 IST)
ಬೆಂಗಳೂರು : ಡಿಸೆಂಬರ್ 26ರಂದು ಅಮವಾಸ್ಯೆಯ ಜೊತೆಗೆ ಸೂರ್ಯಗ್ರಹಣ ಇದೆ. ಈ ವಿಶೇಷವಾದ ದಿನದ ಹಿಂದಿನ ದಿನ  ಮನೆಯಲ್ಲಿ ನಿಂಬೆಹಣ್ಣಿನಿಂದ ಈ ಒಂದು ಕೆಲಸ ಮಾಡಿದರೆ ನಿಮ್ಮ ಮನೆಯ ಸಕಲ ದೋಷ ಕಳೆಯುತ್ತೆ, ದೃಷ್ಟಿ ದೋಷ ದೂರವಾಗುತ್ತದೆ.ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ದೇವರ ಮನೆಯಲ್ಲಿಟ್ಟು ಡಿಸೆಂಬರ್ 25 ರಂದು ಬೆಳಿಗ್ಗೆ ಅಥವಾ ಸಂಜೆ ಪೂಜೆಯನ್ನು ಮಾಡಿ ಬಳಿಕ ಒಂದು ತಟ್ಟೆಯ ಮೇಲಿಟ್ಟು ನಿಂಬೆ ಹಣ್ಣನ್ನು 2 ಭಾಗವಾಗಿ ಕಟ್ ಮಾಡಬೇಕು. ಆ ನಿಂಬೆ ಹಣ್ಣಿನ 2 ಭಾಗಗಳ ಮೇಲ್ಭಾಗದ ತುಂಬಾ ಕುಂಕುಮವನ್ನು ಹಚ್ಚಿ ಮನೆಯ ಹೊಸ್ತಿಲ ಮೇಲೆ ಇಡಬೇಕು.


ಆಮೇಲೆ ಡಿ.26ರಂದು ಗ್ರಹಣ ಮುಗಿದ ನಂತರ ಮನೆ ಸ್ವಚ್ಚ ಮಾಡಿದ ಬಳಿಕ  ಈ ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಬಳಿಕ ಮನೆಯೊಳಗೆ ಬರುವ ಮುಂಚೆ ಕೈಕಾಲು ತೊಳೆದು ಮನೆಯೊಳಗೆ ಪ್ರವೇಶಿಸಬೇಕು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ