ವೃಶ್ಚಿಕರಾಶಿಯಲ್ಲಿ ಹುಟ್ಟಿದವರು ಶುಕ್ರವಾರದಂದು ಹೀಗೆ ಮಾಡಿದರೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ

ಮಂಗಳವಾರ, 31 ಡಿಸೆಂಬರ್ 2019 (06:09 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದ ಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ವೃಶ್ಚಿಕರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.ವೃಶ್ಚಿಕರಾಶಿಯಲ್ಲಿ ಹುಟ್ಟಿದವರು ಉತ್ತರದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ನೀವು ಮನೆಯಲ್ಲಿ ಬೇವಿನ ಗಿಡ ಮತ್ತು ಕಾಮಕಸ್ತೂರಿ ಗಿಡವನ್ನು ಬೆಳೆಸಬೇಕು. ಅದಕ್ಕೆ ಪ್ರತಿದಿನ ನೀರು ಹಾಕಬೇಕು. ಇದರಿಂದ ನಿಮಗೆ ಬೇಗ ಐಶ್ವರ್ಯ ಪ್ರಾಪ್ತಿಯಾಗುತ್ತದೆ.


ಹಾಗೇ ಇವರು ಶುಕ್ರವಾರದಂದು ಜುಟ್ಟು ಇರುವ ತೆಂಗಿನಕಾಯಿಯನ್ನು ಕೆಂಪು ವಸ್ತ್ರದಲ್ಲಿ ಇಟ್ಟು ಗಂಟನ್ನು ಕಟ್ಟಿ ದೇವರ ಮನೆಯಲ್ಲಿಡಬೇಕು. ನಿಮಗೆ ಹಣ ಬಂದ ಸಮಯದಲ್ಲಿ ಈ ತೆಂಗಿನಕಾಯಿಯನ್ನು ಅಮ್ಮನವರ ಸನ್ನಿದಿಯಲ್ಲಿ ಸಮರ್ಪಣೆ ಮಾಡಬೇಕು. ಇದರಿಂದ ಲಕ್ಷ್ಮೀದೇವಿಯ ಅನುಗ್ರಹದಿಂದ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ