ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು. ಯಾಕೆ ಹಾಕಬೇಕು ಗೊತ್ತಾ…?

ಸೋಮವಾರ, 23 ಏಪ್ರಿಲ್ 2018 (05:55 IST)
ಬೆಂಗಳೂರು : ನಾವು ದೇವಸ್ಥಾನಕ್ಕೆ ಹೋದಾಗ ಪ್ರದಕ್ಷಿಣೆ ಮಾಡುತ್ತೇವೆ. ಸಾಮಾನ್ಯವಾಗಿ ಮೂರು, ಐದು, ಒಂಬತ್ತು, ಹನ್ನೊಂದು ಹೀಗೆ ನಮಗಿಷ್ಟವಾದಂತೆ ಪ್ರದಕ್ಷಿಣೆ ಮಾಡುತ್ತೇವೆ. ಆದರೆ ದೇವರ ಸುತ್ತ ಪ್ರದಕ್ಷಿಣೆ ಮೂರು ಸಲ ಮಾಡಬೇಕು. ಹೆಚ್ಚು ಪ್ರದಕ್ಷಿಣೆ ಮಾಡಿದರೆ ನಮ್ಮ ಕೋರಿಕೆ ನೆರವೇರುತ್ತದೆ ಎಂಬುದು ನಮ್ಮ ಭ್ರಮೆ ಎನ್ನುತ್ತಿದ್ದಾರೆ ತಿಳಿದವರು.


ಮೂರು ಪ್ರದಕ್ಷಿಣೆಗಳ ಮೂಲಕ ನಮಗೆ ತ್ರಿಗುಣಾತ್ಮಕವಾದ ಶಿವನ ದರ್ಶನ ಲಭಿಸುತ್ತದೆ.ಆ  ಮೂರು ಪ್ರದಕ್ಷಿಣೆಗಳಿಗೆ ಮೂರು ಲಕ್ಷಣಗಳಿವೆ. ಅವೇನೆಂದು ತಿಳಿದುಕೊಳ್ಳಿ.


ಮೊದಲ ಪ್ರದಕ್ಷಿಣೆ ಮಾಡಿ ತಮೋ ಗುಣ ಬಿಡಬೇಕು. ಕ್ರೌರ್ಯ, ನಿದ್ದೆ, ಸೋಮಾರಿತನ ಬಿಡಬೇಕು. ಶಿಸ್ತನ್ನು ಹೊಂದಿರಬೇಕು. ಎರಡನೇ ಪ್ರದಕ್ಷಿಣೆ ಮಾಡಿ ರಜೋ ಗುಣ ಬಿಡಬೇಕು. ಇತರರ ಜತೆಗೆ ಸ್ಪರ್ಧಿಸುವುದು, ಇತರ ಬಗ್ಗೆ ಕೋಪ, ದ್ವೆಷ, ದಳ್ಳುರಿ ಬಿಡಬೇಕು. ಮೂರನೇ ಪ್ರದಕ್ಷಿಣೆ ಮಾಡಿ ಸತ್ಯಗುಣ ಬಿಡಬೇಕು. ಎಲ್ಲರಿಗಿಂತಲೂ ನಾನೇ ದೊಡ್ಡವ, ನಾನೇ ಒಳ್ಳೆಯವ, ನನ್ನಷ್ಟು ಯಾರೂ ಇಲ್ಲ ಎಂಬ ಲಕ್ಷಣಗಳನ್ನು ಬಿಡಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ