ಇಂತಹ ಸಮಸ್ಯೆಗಳು ನಿಮ್ಮನ್ನ ಕಾಡುತ್ತಿದ್ದರೆ ಹೀಗೆ ದೃಷ್ಟಿ ತೆಗೆಯಿರಿ

ಗುರುವಾರ, 26 ಮಾರ್ಚ್ 2020 (07:07 IST)
ಬೆಂಗಳೂರು : ಕೆಲವರಿಗೆ ಮಾಮಚಾರ, ದೃಷ್ಟಿದೋಷ, ಹಣಕಾಸಿನ ಸಮಸ್ಯೆ ಹೀಗೆ ಹಲವು ಸಮಸ್ಯೆಗಳು ಕಾಡುತ್ತಿರುತ್ತದೆ. ಅಂತವರು ಅಮವಾಸ್ಯೆಯಂದು ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆ ದೂರವಾಗುತ್ತದೆ.


ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಯನ್ನು ಒಂದು ಕಡೆ ಕುಳಿತುಕೊಳ್ಳಲು ಹೇಳಿ, ನಿಮ್ಮ ಎಡಗೈಯಲ್ಲಿ ನಿಂಬೆ ಹಣ್ಣು, ಸ್ವಲ್ಪ ಕಲ್ಲುಪ್ಪು ಹಾಗೂ ಒಣಮೆಣಸಿನ ಕಾಯಿ ತೆಗೆದುಕೊಂಡು ವ್ಯಕ್ತಿಯ ಎಡಭಾಗದಿಂದ ಮೂರು ಬಾರಿ ಸುತ್ತಿಸಿ ಬಳಿಕ ತಲೆಯಿಂದ ನೆಲಕ್ಕೆ ತಾಗುವಂತೆ ಮೂರು ಬಾರಿ ಸುತ್ತಿಸಿ.


ನಂತರ ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು, ಉಳಿದೆರಡು ವಸ್ತುಗಳನ್ನು ಒಂದು ಕವರ್ ನಲ್ಲಿ ಹಾಕಿ. ನಿಂಬೆಹಣ್ಣನ್ನು ಮನೆಯ ಹೊರಗೆ ನಿಂತು ಎಡಕಾಲಿನಿಂದ ಅದನ್ನು ತುಳಿದು ಆ ಮೂರು ವಸ್ತುಗಳನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬರಬೇಕು. ಮನೆಯ ಒಳಗೆ ಬರುವ ಮುಂಚೆ ಕೈಕಾಲು ತೊಳೆದು ಮನೆಯೊಳಗೆ ಬರಬೇಕು.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ