ಕಾರ್ತಿಕ ಮಾಸದಲ್ಲಿ ಇದರಿಂದ ದೀಪ ಬೆಳಗಿದರೆ ಸಕಲ ಗ್ರಹದೋಷಗಳು ನಿವಾರಣೆಯಾಗುತ್ತದೆಯಂತೆ

ಶುಕ್ರವಾರ, 8 ನವೆಂಬರ್ 2019 (09:33 IST)
ಬೆಂಗಳೂರು : ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿಗೆ ಸಾಕಷ್ಟು ಪ್ರಾಶಸ್ತ್ಯವಿದೆ. ನೆಲ್ಲಿಕಾಯಿ ಇಲ್ಲದೆ ಕಾರ್ತಿಕ ಮಾಸದ ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುವುದಿಲ್ಲ.




ನೆಲ್ಲಿಕಾಯಿಯಲ್ಲಿ ಎಲ್ಲಿ ಇರುತ್ತದೆಯೋ ಅಲ್ಲಿ ಮಹಾಲಕ್ಷ್ಮೀಯ ಕೃಪಾಕಟಾಕ್ಷವಿರುತ್ತದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿಯಿಂದ ದೀಪಾರಾಧನೆ ಮಾಡಿದರೆ ಸಕಲ ಸಮ್ಮಂಗಳಗಳು ಉಂಟಾಗುತ್ತದೆ. ಹಾಗೇ ಸಕಲ ಗ್ರಹದೋಷಗಳು ನಿವಾರಣೆಯಾಗುತ್ತದೆ.


ಕಾರ್ತಿಕ ಹುಣ್ಣಿಮೆಯಂದು ನೆಲ್ಲಿಕಾಯಿ ದೀಪ ಬೆಳಗಬೇಕು. ಒಂದು ವೇಳೆ ಅಂದು  ಸಾಧ್ಯವಾಗದವರು  ಕಾರ್ತಿಕ ಸೋಮವಾರದಂದು ನೆಲ್ಲಿಕಾಯಿ ದೀಪವನ್ನು ಹಚ್ಚಿದರೆ ಸಕಲ ಇಷ್ಟಾರ್ಥಗಳು ನೆರವೇರುತ್ತದೆ. ಹಾಗೇ ನೆಲ್ಲಿಕಾಯಿ ದೀಪ ಹಚ್ಚುವಾಗ 5, 9,11,2 ನೆಲ್ಲಿಕಾಯಿಗಳನ್ನು ತೆಗೆದುಕೊಳ್ಳಿ. ಮನೆಯನ್ನು ಶುಭ್ರಗೊಳಿಸಿ ಬ್ರಾಹ್ಮಿ ಮುಹೂರ್ತದಲ್ಲಿ ಮನೆಯ ದೇವರ ಮನೆಯಲ್ಲಿ ಹಾಗೂ ತುಳಸಿಕಟ್ಟೆಯ ಮುಂದೆ ನೆಲ್ಲಿಕಾಯಿ ದೀಪ ಬೆಳಗಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ