ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಭಾನುವಾರ, 24 ಮೇ 2020 (09:09 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹಾಯಾಸವಾಗಬಹುದು. ಸಂಗಾತಿಯೊಂದಿಗೆ ಮನಸ್ತಾಪವಾಗದಂತೆ ಎಚ್ಚರಿಕೆ ವಹಿಸಿ. ಮಾನಸಿಕ ಚಿಂತೆಗಳಿಗೆ ಒಂದು ಪರಿಹಾರ ಕಂಡುಕೊಳ್ಳಲಿದ್ದೀರಿ. ಆರ್ಥಿಕವಾಗಿ ನಾನಾ ರೀತಿಯ ಖರ್ಚುಗಳು ಎದುರಾಗಲಿವೆ.

ವೃಷಭ: ದೈವಾನುಗ್ರಹದಿಂದ ಇಂದು ಮನೆಯಲ್ಲಿ ಸುಖ ಶಾಂತಿ ನೆಲೆಸಿರಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಆದರೆ ನೆರೆಹೊರೆಯವರೊಂದಿಗೆ ವರ್ತಿಸುವಾಗ ಎಚ್ಚರಿಕೆಯಿಂದಿರಿ.

ಮಿಥುನ: ಮನದಲ್ಲಿ ಅಂದುಕೊಂಡಿದ್ದ ಕೆಲಸಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ವ್ಯಾಪಾರ, ವ್ಯವಹಾರದಲ್ಲಿ ತಕ್ಕಮಟ್ಟಿನ ಏಳಿಗೆ ಕಂಡುಬರಲಿದೆ. ಹಿರಿಯರ ಸಲಹೆಗಳನ್ನು ಕಾರ್ಯರೂಪಕ್ಕೆ ತಂದರೆ ಸಫಲರಾಗುವಿರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.

ಕರ್ಕಟಕ: ಮನೋಕಾಮನೆಗಳ ಪೂರೈಕೆಗೆ ದೇವರ ಮೊರೆ ಹೋಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದಾಯಾದಿಗಳೊಂದಿಗೆ ಹಳೆಯ ವೈಷಮ್ಯ ಮರೆತು ಮುನ್ನಡೆದರೆ ಉತ್ತಮ.

ಸಿಂಹ: ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಲಿದ್ದೀರಿ. ಅನಿರೀಕ್ಷಿತ ರೀತಿಯಲ್ಲಿ ನೀವು ಅಂದುಕೊಂಡಿದ್ದ ಕೆಲಸಗಳು ನೆರವೇರಲಿದೆ. ಖರ್ಚು ವೆಚ್ಚಗಳು ಅಧಿಕವಾಗಿದ್ದರೂ ಸಕಾಲದಲ್ಲಿ ಧನಾಗಮನವಾಗುವುದರಿಂದ ಸಂತಸವಾಗಲಿದೆ.

 
ಕನ್ಯಾ: ಆಪ್ತರ ಬಗ್ಗೆ ಇದುವರೆಗೆ ಇದ್ದ ತಪ್ಪು ಕಲ್ಪನೆಗಳು ದೂರವಾಗಲಿದೆ. ಕೌಟುಂಬಿಕವಾಗಿ ಸಂತೋಷದ ದಿನ ಕಳೆಯಲಿದ್ದೀರಿ. ಮಕ್ಕಳ ಬೇಡಿಕೆ ಪೂರೈಸಲು ಧನ ವ್ಯಯಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ.

ತುಲಾ: ಕಾರ್ಯರಂಗದಲ್ಲಿ ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ವ್ಯಾಪಾರಿ ವರ್ಗದವರಿಗೆ ವಂಚನೆಯ ಅಪಾಯವಿದ್ದು, ಎಚ್ಚರಿಕೆಯಿಂದ ವ್ಯವಹರಿಸಬೇಕು. ವಾಹನ ಖರೀದಿ ಯೋಗವಿದೆ. ಮಾನಸಿಕವಾಗಿ ಉದ್ವೇಗಕ್ಕೊಳಗಾಗದಂತೆ ಎಚ್ಚರಿಕೆ ವಹಿಸಿ.

ವೃಶ್ಚಿಕ: ಯೋಗ್ಯ ವಯಸ್ಕರಿಗೆ ಉತ್ತಮ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ಶುಭ ಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರಿಕೆಯಿರಲಿ.

ಧನು: ಯಾವುದೇ ಕೆಲಸವನ್ನು ಮಾಡುವುದಕ್ಕಿಂತ ಮುನ್ನ ಸರಿಯಾಗಿ ಯೋಚಿಸಿ ಮುಂದೆ ಹೆಜ್ಜೆ ಹಾಕಿ. ಸಂಗಾತಿಯ ಸಲಹೆಗಳನ್ನು ಉಪೇಕ್ಷಿಸಬೇಡಿ. ವ್ಯಾಪಾರಿ ವರ್ಗದವರಿಗೆ ಮುನ್ನಡೆಯ ಯೋಗವಿದೆ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ಆರೋಗ್ಯ ಕೈಕೊಡಬಹುದು.

ಮಕರ: ಹಿರಿಯರಿಗೆ ದೇವತಾ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ. ಆರ್ಥಿಕವಾಗಿ ಆದಾಯವಿದ್ದಷ್ಟೇ ಖರ್ಚೂ ಇರಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ.

ಕುಂಭ: ಅನವಶ್ಯಕವಾಗಿ ಕೋಪದ ಕೈಗೆ ಬುದ್ಧಿ ಕೊಟ್ಟು ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸಗಳಿಗೆ ಹಿತಶತ್ರುಗಳಿಂದ ಅಡ್ಡಿ ಎದುರಾಗಬಹುದು. ಎಚ್ಚರಿಕೆಯಿಂದ ಹೆಜ್ಜೆಯಿಡಿ. ಗೃಹ ಸಂಬಂಧೀ ಕೆಲಸಗಳಿಗಾಗಿ ಖರ್ಚು ವೆಚ್ಚವಾಗಲಿದೆ. ಕಿರು ಓಡಾಟ ನಡೆಸಬೇಕಾಗುತ್ತದೆ.

ಮೀನ: ನಿಮ್ಮಲ್ಲಿ ಹೊಂದಾಣಿಕೆಯ ಮನೋಭಾವವಿದ್ದರೆ ಎಂತಹ ಕಷ್ಟವನ್ನೇ ಆದರೂ ಎದುರಿಸಲಿದ್ದೀರಿ. ಅನಗತ್ಯ ವಾದ ವಿವಾದಗಳಿಂದ ದೂರವಿದ್ದರೆ ಒಳಿತು. ಅನಿರೀಕ್ಷಿತವಾಗಿ ಹಳೆಯ ಮಿತ್ರನ ಭೇಟಿಯಾಗಲಿದ್ದೀರಿ. ಮಹಿಳೆಯರಿಗೆ ಆಕಸ್ಮಿಕವಾಗಿ ಧನಲಾಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ