ಪೂಜೆಗೆ ಮೊದಲು ಸಂಕಲ್ಪ ಮಾಡುವುದರ ಮಹತ್ವವೇನು ಗೊತ್ತಾ?

ಗುರುವಾರ, 14 ಫೆಬ್ರವರಿ 2019 (08:56 IST)
ಬೆಂಗಳೂರು: ದೇವಾಲಯವಿರಲಿ, ಮನೆಯಲ್ಲೇ ಏನಾದರೂ ಪೂಜೆ ಮಾಡಿಸುತ್ತಿರಲಿ, ಪೂಜೆಗೆ ಮೊದಲು ಸಂಕಲ್ಪ ಮಾಡುವ ಪದ್ಧತಿಯಿದೆ. ಇದರ ಮಹತ್ವವೇನು ಗೊತ್ತಾ?


ಸಂಕಲ್ಪ ಎಂದರೆ ನಮ್ಮ ಮನಸ್ಸಿನಲ್ಲಿ ಇರುವ ಆಸೆ, ಮುಖ್ಯವಾದ ಯೋಜನೆ, ಮತ್ತು ಮಾಡಬೇಕಾದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವಂತೆ ದೇವರ ಮುಂದೆ ಬೇಡಿಕೊಳ್ಳುವುದು.

ಸಂಕಲ್ಪದ ಸಮಯದಲ್ಲಿ ಗುರು ಹಿರಿಯರನ್ನು, ತಂದೆ ತಾಯಿಯರನ್ನು ನೆನೆಸಿಕೊಂಡು ನಮ್ಮ ಮುಂದಿನ ಗುರಿ ಸಾಧಿಸುವುದಕ್ಕೆ ದೇವರ ಮುಂದೆ ಪ್ರಾರ್ಥಿಸಬೇಕು. ನಮ್ಮ ಮನೋಭಿಲಾಷೆಯನ್ನು ಭಗವಂತನಲ್ಲಿ ಅರ್ಪಿಸಬೇಕು.

ಸಂಕಲ್ಪವನ್ನು ಎಷ್ಟು ಶ್ರದ್ಧೆಯಿಂದ ಮಾಡುತ್ತೇವೋ, ಅಷ್ಟೇ ಯಶಸ್ಸು ಸಿಗುವುದು. ಇಲ್ಲದಿದ್ದರೆ ಯಾವುದೇ ಪೂಜೆ, ಜಪ ತಪಗಳು ಫಲ ಕೊಡುವುದಿಲ್ಲ. ಒಂದು ನಿರ್ದಿಷ್ಟವಾದ ಮನೋ ನಿಶ್ಚಯವಿದ್ದರಷ್ಟೇ ಪೂಜೆಯ ಫಲ ಸಿಗುವುದು. ಅದಕ್ಕಾಗಿ ಶ್ರದ್ಧೆಯಿಂದ ಸಂಕಲ್ಪ ಮಾಡಿಕೊಳ್ಳುವುದು ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ