ಸೂರ್ಯ ಗ್ರಹಣ: ಯಾವ ರಾಶಿಯವರಿಗೆ ಯಾವ ರೀತಿ ಪರಿಣಾಮವಾಗುತ್ತದೆ?

ಗುರುವಾರ, 26 ಡಿಸೆಂಬರ್ 2019 (07:59 IST)
ಬೆಂಗಳೂರು: ಇಂದು ಧನು ರಾಶಿಯಲ್ಲಿ ಸೂರ್ಯ ಗ್ರಹಣವಾಗುತ್ತಿದೆ. ಆದರೆ ವಿನಾಕಾರಣ ಇದರ ಬಗ್ಗೆ ಭಯ ಬೇಕಾಗಿಲ್ಲ. ಯಾವ ರಾಶಿಯವರಿಗೆ ಯಾವ ರೀತಿ ಫಲ ಸಿಗುತ್ತದೆ ಎಂದು ನೋಡೋಣ.


ಮೇಷ: ಲಗ್ನಾಧಿಪತಿ ಗುರುವಿನಲ್ಲೇ ಇರುವುದರಿಂದ ಈ ರಾಶಿಯವರಿಗೆ ಹಾನಿಯಿಲ್ಲ.
ವೃಷಭ: ಅಷ್ಟಮದಲ್ಲಿ ಗ್ರಹಣವಿರುವುದರಿಂದ ಈ ರಾಶಿಯವರಿಗೆ ತೊಂದರೆಯಾಗಬಹುದು.
ಮಿಥುನ: ಎದುರು ಮನೆಯಲ್ಲಿ ಗ್ರಹಣವಾಗಿರುವುದರಿಂದ ತೊಂದರೆಯಿದೆ.
ಕರ್ಕಟಕ: ಷಷ್ಠದಲ್ಲಿ ಗ್ರಹಣವಿರುವುದರಿಂದ ಅನಾರೋಗ್ಯ, ಖರ್ಚು ಕಂಡುಬರಬಹುದು.
ಸಿಂಹ: ಈ ರಾಶಿಯ ಅಧಿಪತಿಯನ್ನು ಕೇತು ಬಾಲ ಏನೂ ಮಾಡುವುದಿಲ್ಲ. ಆದರೂ ದೇವರ ಜಪ ಮಾಡಿ.
ಕನ್ಯಾ: ಕೇಂದ್ರದಲ್ಲಿ ಗ್ರಹಣ ಕಾರಣ ಅನುಕೂಲ, ಸುಖ ಸ್ಥಾನ.
ತುಲಾ: ಮೂರನೇ ಮನೆಯಲ್ಲಿ ಗ್ರಹಣವಿರುವುದರಿಂದ ತೊಂದರೆಯಿಲ್ಲ.
ವೃಶ್ಚಿಕಾ: ದನ ಸ್ಥಾನದಲ್ಲಿ ಗ್ರಹಣವಿರುವುದರಿಂದ ಕುಟುಂಬ ಸ್ಥಾನದಲ್ಲಿ ಬಹಳ ಒಳ್ಳೆಯದು.
ಧನು: ಎಲ್ಲಾ ಸಮಸ್ಯೆಗಳಿಂದ ಪಾರಾಗುವಿರಿ.
ಮಕರ: ವ್ಯಯ ಸ್ಥಾನದಲ್ಲಿ ಗ್ರಹಣ ಉತ್ತಮ
ಕುಂಭ: ತೊಂದರೆಗಳಿಂದ ಪಾರಾಗಿ ಲಾಭ ಗಳಿಸುವರು.
ಮೀನ: ಉದ್ಯೋಗದಲ್ಲಿ ಯಾವ ರೀತಿಯ ತೊಂದರೆಯೂ ಆಗದು.

ಗ್ರಹಣವಿರುವ ರಾಶಿ, ನಕ್ಷತ್ರದವರಿಗೆ ಕೆಲವು ದಿನ ವಂಚನೆ, ಭ್ರಮೆ, ನಂಬಿಕೆ ದ್ರೋಹ ಎದುರಾಗಬಹುದು. ಕೆಲವು ದಿನಗಳವರೆಗೂ ಅಡಚಣೆ ಎದುರಿಸಬೇಕಾಗಬಹುದು. ತೊಂದರೆ ನಿವಾರಣೆಗೆ ಶಿವ ಸಹಸ್ರನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಹಾಗೂ ಲಲಿತಾ ಸಹಸ್ರನಾಮವನ್ನು ಗ್ರಹಣ ಕಾಲದಲ್ಲಿ ಪಠಿಸಿದರೆ ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ