ಆವಕಾಡೊ ಹಣ್ಣಿನ ಫೇಸ್ ಪ್ಯಾಕ್ ಬಳಸಿ ಮುಖಕ್ಕೆ ಹೊಳಪು ತನ್ನಿ

Krishnaveni K

ಸೋಮವಾರ, 26 ಫೆಬ್ರವರಿ 2024 (10:30 IST)
Photo Courtesy: Twitter
ಬೆಂಗಳೂರು: ಆವಕಾಡೊ ಹಣ‍್ಣಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಅವುಗಳನ್ನು ಸೇವಿಸುವುದು ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭ ತಂದುಕೊಡುತ್ತದೆ ಎನ್ನುವುದೇನೋ ನಿಜ. ಆದರೆ ಇದರ ಜೊತೆಗೆ ಇದರ ಫೇಸ್ ಪ್ಯಾಕ್ ಕೂಡಾ ಉತ್ತಮವಾಗಿದೆ ಎಂದು ಗೊತ್ತಾ?

ಆವಕಾಡೊನಲ್ಲಿರುವ ಪೋಷಕಾಂಶಗಳು ನಮ್ಮ ಮುಖದ ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಆವಕಾಡೊ ಹಣ್ಣನ್ನು ಪೇಸ್ಟ್ ಮಾಡಿಕೊಂಡು ಮುಖಕ್ಕೆ ನಿಯಮಿತವಾಗಿ ಹಚ್ಚುವುದರಿಂದ ಮುಖ ಕಾಂತಿ ಹೆಚ್ಚುವುದಲ್ಲದೆ, ಚರ್ಮದ ಆರೋಗ್ಯ ಉತ್ತಮವಾಗುತ್ತದೆ.

ಇದಕ್ಕೆ ಬೇಕಾಗಿರುವುದು ಕಡಿಮೆ ಐಟಂಗಳು. ಆವಕಾಡೊ ಹಣ್ಣು, ಓಟ್ಸ್ ಮತ್ತು ಸ್ವಲ್ಪ ಜೇನು ತುಪ್ಪ ಇದ್ದರೆ ಸಾಕು. ಈ ಪೇಸ್ಟ್ ನ ಫೇಸ್ ಪ್ಯಾಕ್ ಮಾಡುವುದರಿಂದ ಮುಖದಲ್ಲಿ ತೇವಾಂಶ ಉಳಿದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಚರ್ಮದ ಬಿರುಕು ಕೂಡಾ ನಾಶವಾಗುತ್ತದೆ.

ಆವಕಾಡೊ, ಓಟ್ಸ್ ಮತ್ತು ಜೇನು ತುಪ್ಪವನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಈ ಫೇಸ್ ಪ್ಯಾಕ್ ನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 10 ರಿಂದ 15 ನಿಮಿಷ ಬಿಡಿ. ಬಳಿಕ ಹದ ಬಿಸಿ ನೀರಿನಲ್ಲಿ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಮೃದುವಾದ ಟವೆಲ್ ನಿಂದ ಮುಖ ಒರೆಸಿಕೊಳ್ಳಿ. ಇದೇ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ