ಗಾಯತ್ರಿ ಮಂತ್ರದ ಸಾರವೇನು?

ಶನಿವಾರ, 11 ಮಾರ್ಚ್ 2017 (08:35 IST)
ಬೆಂಗಳೂರು: ಗಾಯತ್ರಿ ಮಂತ್ರದ ಬಗೆಗೆ ಹಿಂದೆ ತಿಳಿದುಕೊಂಡಿದ್ದೇವೆ. ಈ ಗಾಯತ್ರಿ ಮಂತ್ರದ ಅರ್ಥವೇನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

 
ಓಂ ಭೂರ್ಭುವಃ ಸ್ವಃ ತತ್ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನ ಪ್ರಚೋದಯಾತ್

ಇದು ಗಾಯತ್ರಿ ಮಂತ್ರ. ಇದರ ಅರ್ಥ, ಓ ದೇವರೇ, ರಕ್ಷಕನೇ, ಎಲ್ಲದರ ಮೂಲನೇ, ಅವನು ಸ್ವಯಂಭೂತನಾದಂತವನು, ಎಲ್ಲಾ ನೋವುಗಳಿಂದ ಮುಕ್ತನಾದವನು, ಆತನ ಸಂಪರ್ಕದಿಂದ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗುವುದು, ಆತ ಪರಿಶುದ್ಧನು, ಆ ದೇವನನ್ನು ಪೂಜಿಸೋಣ, ಇದರಿಂದ ಆತ ನಮ್ಮ ಮನಸ್ಸನ್ನು ಸರಿಯಾದ ದಿಕ್ಕಿನತ್ತ ನಡೆಸಿಯಾನು.

ಇದು ಗಾಯತ್ರಿ ಮಂತ್ರದ ಅರ್ಥ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ