ಕೊರೋನಾಗೆ ಬಲಿಯಾದ ಖ್ಯಾತ ಬಾಲಿವುಡ್ ಸಂಗೀತ ನಿರ್ದೇಶಕ ವಾಜಿದ್

ಸೋಮವಾರ, 1 ಜೂನ್ 2020 (09:45 IST)
ಮುಂಬೈ: ಖ್ಯಾತ ಸಂಗೀತ ನಿರ್ದೇಶಕ ಜೋಡಿ ಸಾಜಿದ್-ವಾಜಿದ್ ಪೈಕಿ ವಾಜಿದ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ ಕೆಲವು ದಿನಗಳ ಹಿಂದಷ್ಟೇ ಕೊರೋನಾ ಇರುವುದು ದೃಢಪಟ್ಟಿತ್ತು.


42 ವರ್ಷದ ವಾಜಿದ್ ಗೆ ತಿಂಗಳುಗಳ ಹಿಂದಷ್ಟೇ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ನಡೆದಿತ್ತು. ಇದೀಗ ಕೊರೋನಾ ಬಳಿಕ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯೂ ಉಲ್ಬಣಿಸಿತ್ತು ಎನ್ನಲಾಗಿದೆ.

ಸಲ್ಮಾನ್ ಖಾನ್ ನ ಸಿನಿಮಾಗಳಲ್ಲಿ ಹೆಚ್ಚಿನ ಹಾಡು ಕಂಪೋಸ್ ಮಾಡಿದ್ದ ವಾಜಿದ್ ಮತ್ತು ಸಾಜಿದ್ ಜೋಡಿ 1998 ರಲ್ಲಿ ಅವರ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾ ಮೂಲಕ ಸಿನಿಮಾಗೆ ಪದಾರ್ಪಣೆ ಮಾಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ