ಮಗು ಬರುವ ಹೊತ್ತಲ್ಲಿ ಜಗಳ ಮಾಡಿಕೊಂಡ್ರಾ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

Krishnaveni K

ಬುಧವಾರ, 8 ಮೇ 2024 (13:13 IST)
ಮುಂಬೈ: ಇನ್ನೇನು ಕೆಲವೇ ದಿನಗಳಲ್ಲಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ. ಆದರೆ ಇದರ ನಡುವೆಯೇ ದೀಪಿಕಾ ಮತ್ತು ರಣವೀರ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗುಸು ಗುಸು ಸುದ್ದಿಯೊಂದು ಕೇಳಿಬರುತ್ತಿದೆ.

ರಣವೀರ್ ಸಿಂಗ್ ತಮ್ಮ ಸೋಷಿಯಲ್ ಮೀಡಿಯಾ ಪುಟದಿಂದ ದೀಪಿಕಾ ಜೊತೆಗಿನ ವಿವಾಹದ ಫೋಟೋಗಳನ್ನು ಡಿಲೀಟ್ ಮಾಡಿದ್ದೇ ಈ ಅನುಮಾನ ಹುಟ್ಟಲು ಕಾರಣ. ಮಗು ಬರುವ ಹೊತ್ತಿನಲ್ಲಿ ಗಂಡ-ಹೆಂಡತಿ ಜಗಳ ಮಾಡಿಕೊಂಡು ದೂರವಾಗಲು ಹೊರಟಿದ್ದಾರಾ ಎಂದು ಅನುಮಾನ ಮೂಡಿಸಿತ್ತು.

2018 ರಲ್ಲಿ ದೀಪಿಕಾ ಮತ್ತು ರಣವೀರ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಟೆಲಿಯಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಇಬ್ಬರ ಮದುವೆ ನಡೆದಿತ್ತು. ಕಳೆದ ವರ್ಷ ಇದೇ ರೀತಿ ಇಬ್ಬರೂ ದೂರವಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಬಳಿಕ ದಂಪತಿ ತಮ್ಮಿಬ್ಬರ ಜೀವನದಲ್ಲಿ ಮೊದಲ ಮಗುವಿನ ಆಗಮನ ಖುಷಿಯನ್ನು ಹಂಚಿಕೊಂಡುರೂಮರ್ ಗಳಿಗೆ ತೆರೆ ಎಳೆದಿದ್ದರು.

ಆದರೆ ಈಗ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾ ಪುಟದಿಂದ ಮದುವೆ ಫೋಟೋ ತೆಗೆದು ಹಾಕಿದ್ದೇಕೆ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಮೂಡಿದೆ. ಇಬ್ಬರ ನಡುವೆ ಅಂತಹ ಜಗಳವೇನಾದರೂ ನಡೆದಿದೆಯಾ ಎಂಬ ಅನುಮಾನ ಮೂಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ