ಮುಂಬೈ ಪೊಲೀಸರಿಗೆ 1 ಲಕ್ಷ ಸ್ಯಾನಿಟೈಸರ್ ವಿತರಿಸಿದ ಸಲ್ಮಾನ್ ಖಾನ್

ಭಾನುವಾರ, 31 ಮೇ 2020 (09:30 IST)
ಮುಂಬೈ: ಕೊರೋನಾ ವಿರುದ್ಧ ಹೋರಾಟಕ್ಕೆ ಹಗಲು ರಾತ್ರಿಯೆನ್ನದೇ ದುಡಿಯುತ್ತಿರುವ ಪೊಲೀಸರು ಅತೀ ಹೆಚ್ಚು ಅಪಾಯದಲ್ಲಿದ್ದಾರೆ. ಈ ಆರೋಗ್ಯ ಯೋಧರಿಗೆ ನಟ ಸಲ್ಮಾನ್ ಖಾನ್ ನೆರವು ನೀಡಿದ್ದಾರೆ.


ಕೊರೋನಾದಿಂದ ಸುರಕ್ಷಿತವಾಗಿರಲು ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ಹೀಗಾಗಿ ಮುಂಬೈ ಪೊಲೀಸರಿಗೆ ಸಲ್ಮಾನ್  1 ಲಕ್ಷ ಸ್ಯಾನಿಟೈಸರ್ ನೀಡಿದ್ದಾರೆ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿಯವರ ಟ್ವಿಟರ್ ಖಾತೆ ಮಾಹಿತಿ ನೀಡಿದ್ದು, ಸಲ್ಮಾನ್ ಗೆ ಧನ್ಯವಾದ ಸಲ್ಲಿಸಿದೆ.

ಈಗಾಗಲೇ ಸಲ್ಮಾನ್ ಸಂಕಷ್ಟದಲ್ಲಿರುವವರಿಗೆ ಊಟ, ದಿನಸಿ, ಧನ ಸಹಾಯ ಮಾಡಿ ಸುದ್ದಿಯಾಗಿದ್ದಾರೆ. ಈಗ ಮತ್ತೊಂದು ಹೆಜ್ಜೆಯಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ