ಕೊರೊನಾ ಎಫೆಕ್ಟ್; ಮೈಸೂರು ಅರಮನೆ 3 ದಿನ ಬಂದ್

ಶುಕ್ರವಾರ, 10 ಜುಲೈ 2020 (09:58 IST)
Normal 0 false false false EN-US X-NONE X-NONE

ಮೈಸೂರು : ರಾಜ್ಯದೆಲ್ಲೆಡೆ ರಣಕೇಕೆ ಹಾಕುತ್ತಿರುವ ಕೊರೊನಾ ವೈರಸ್ ಇದೀಗ ಮೈಸೂರು ಅರಮನೆಗೂ ಕಂಟಕವನ್ನುಂಟುಮಾಡಿದೆ.

ಅರಮನೆ ಒಂಟೆ ಪಾಲಕನ ಮಗನಿಗೆ ಕೊರೊನಾ ಸೋಂಕು ತಗುಲಿದ್ದು,  ಈ ಹಿನ್ನಲೆಯಲ್ಲಿ  ಮೈಸೂರು ಅರಮನೆಗೆ ನಾಳೆ ಸ್ಯಾನಿಟೈಸ್ ಮಾಡಲಾಗುವುದು. ಹಾಗೇ ಅರಮನೆ ಪ್ರಾಣಿಪಾಲಕರ ಮನೆಗೂ ಸ್ಯಾನಿಟೈಸ್ ಮಾಡಲಾಗುವುದು.

ಆದಕಾರಣ  ಅರಮನೆಗೆ 3 ದಿನ ಸಾರ್ವಜನಿಕರ ಪ್ರವೇಶಕ್ಕೆ  ನಿಷೇಧ ಹೇರಿದ್ದು,  ಅರಮನೆ ಮೂರು ದಿನ ಬಂದ್ ಮಾಡಲಾಗುವುದು ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ