ಕೊರೋನಾ ಇಫೆಕ್ಟ್: ಆರೋಗ್ಯ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆ ಏರಿಕೆ

ಮಂಗಳವಾರ, 26 ಮೇ 2020 (09:05 IST)
ಬೆಂಗಳೂರು: ಕೊರೋನಾ ಎಂಬ ಒಂದು ಮಹಾಮಾರಿ ರೋಗ ಜನರ ಜೀವನ, ಮನಸ್ಥಿತಿ ಎಲ್ಲವನ್ನೂ ಎಷ್ಟು ಬದಲಾಯಿಸಿದೆಯೆಂದರೆ ಯಾವತ್ತೂ ಮಾಡದ ಕೆಲಸವನ್ನು ಮಾಡುವಷ್ಟು ಬದಲಾಗಿದ್ದಾರೆ.


ಭಾರತದಲ್ಲಿ ವೈಯಕ್ತಿಕ ಆರೋಗ್ಯ ವಿಮೆ ಬಗ್ಗೆ ಜನರಿಗೆ ಇದಕ್ಕೂ ಮೊದಲು ಅಷ್ಟೊಂದು ಆಸಕ್ತಿಯೇ ಇರಲಿಲ್ಲ. ಆರೋಗ್ಯ ವಿಮೆ ಮಾಡಿಸಿಕೊಳ್ಳಲು ಜನ ಅಷ್ಟೊಂದು ಮುಂದೆ ಬರುತ್ತಿರಲಿಲ್ಲ.

ಆದರೆ ಈಗ ಕೊರೋನಾ ಬಂದ ಬಳಿಕ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಾಗಿದೆ. ದುಬಾರಿ ಆಸ್ಪತ್ರೆ ವೆಚ್ಚ, ಬದಲಾದ ಜೀವನ ಶೈಲಿ ಜನರ ಮನಸ್ಥಿತಿ ಬದಲಾಯಿಸಿದೆ. ಇದೀಗ ಆರೋಗ್ಯ ವಿಮೆ ಮಾಡಿಸಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ ಎಂದು ವಿಮಾ ಏಜೆಂಟರೊಬ್ಬರು ಹೇಳುತ್ತಾರೆ.

ವಿದ್ಯಾವಂತರೇ ಮೊದಲೆಲ್ಲಾ ಆರೋಗ್ಯ ವಿಮೆ ಬಗ್ಗೆ ಆಸಕ್ತಿ ತೋರುತ್ತಿರಲಿಲ್ಲ. ಆದರೆ ಈಗ ಎಲ್ಲಾ ವರ್ಗದ ಜನರೂ ತಾವಾಗಿಯೇ ಹುಡುಕಿಕೊಂಡು ಬಂದು ಆರೋಗ್ಯ ವಿಮೆ ಮಾಡಿಸಿಕೊಳ್ಳುತ್ತಿದ್ದಾರೆ. ಈ ಜಾಗೃತಿ ಉತ್ತಮವೇ. ಇದು ಇನ್ನಷ್ಟು ಹೆಚ್ಚಬೇಕು ಎನ್ನುವುದು ಎಲ್ ಐಸಿ ಸಲಹೆಗಾರರೊಬ್ಬರ ಅಭಿಪ್ರಾಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ