ಲಾಕ್ ಡೌನ್ ನಿಂದಾಗಿ ಹೆಚ್ಚುತ್ತಿದೆ ಮಾನಸಿಕ ಖಿನ್ನತೆ ಪ್ರಕರಣಗಳು

ಭಾನುವಾರ, 3 ಮೇ 2020 (08:44 IST)
ಬೆಂಗಳೂರು: ಲಾಕ್ ಡೌನ್ ಎಂದು ಜನತೆ ಮನೆಯಲ್ಲೇ ಬಂಧಿಯಾಗಿ ಎಷ್ಟೋ ದಿನ ಕಳೆದಿದೆ. ಇನ್ನೂ ಎರಡು ವಾರ ಕಾಲ ಲಾಕ್ ಡೌನ್ ವಿಸ್ತರಣೆಯಾಗಿದೆ. ಹೀಗಿರುವಾಗ ಮನೆಯಲ್ಲೇ ಬಂಧಿಯಾಗಿರುವವರ ಮಾನಸಿಕ ಆರೋಗ್ಯವೂ ಕ್ಷೀಣಿಸುತ್ತಿದೆ.


ಮಹಿಳೆಯರು ವಿನಾಕಾರಣ ಮನೆಯವರ ಮೇಲೆ ಸಿಡುಕುವುದು, ಕೋಪಗೊಳ್ಳುವುದು, ಬೇಗನೇ ಅಳುವುದು ಇತ್ಯಾದಿ ಖಿನ್ನತೆಯ ಲಕ್ಷಣ ತೋರಿದರೆ ಪುರುಷರಿಗೆ ಭವಿಷ್ಯದ ಭಯ ಕಾಡುತ್ತಿದೆ.

ಇದೆಲ್ಲವೂ ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿದೆ. ಲಾಕ್ ಡೌನ್ ಮುಗಿದ ಮೇಲೂ ಮಾನಸಿಕ ಸ್ವಾಸ್ಥ್ಯ ಕೆಡುವ ಅನೇಕ ಘಟನೆಗಳು ನಡೆಯಲಿವೆ. ಹಲವರು ಉದ್ಯೋಗ ಕಳೆದುಕೊಳ್ಳಲಿದ್ದರೆ, ಇನ್ನು ಹಲವರು ಹಣ ಹೊಂದಿಸಲಾಗದೇ ಮತ್ತಷ್ಟು ನರಕಯಾತನೆ ಅನುಭವಿಸಲಿದ್ದಾರೆ.

ಡಿಪ್ರೆಷನ್ ನಿಂದ ಹೊರಬರಲು ಅನೇಕರು ಡಿಜಿಟಲ್ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಮೊಬೈಲ್ ಅತಿಯಾಗಿ ನೋಡುವುದು, ಟಿವಿ ನೋಡುವುದು, ಇಂಟರ್ನೆಟ್ ಬಳಕೆ ಹೆಚ್ಚುತ್ತಿದೆ. ಅಂತೂ ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ಸಹಕಾರಿಯಾಗಿದ್ದರೂ ಇದರ ಪರಿಣಾಮ ಇನ್ನೊಂದು ರೀತಿಯಾಗಿ ಜನರ ಮೇಲಾಗುತ್ತಿದೆ ಎನ್ನುವುದನ್ನು ಮರೆಯಬಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ