ನಿಮ್ಮ ಮೊಬೈಲ್ ಫೋನ್ ನಿಂದಲೂ ಹರಡಬಹುದು ಕೊರೋನಾ!

ಬುಧವಾರ, 27 ಮೇ 2020 (08:35 IST)
ಬೆಂಗಳೂರು: ಮೊಬೈಲ್ ಫೋನ್ ಎಂಬುದು ಎಲ್ಲರ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ಇದು ರೋಗ ಹರಡಲು ಬಹುಮುಖ್ಯ ಕಾರಣವಾಗಬಹುದು ಎಂಬುದು ನಿಮಗೆ ಗೊತ್ತಿರಲಿ.


ನಾವು ಹೋದಲ್ಲೆಲ್ಲಾ ಹಿಂಬಾಲಿಸುವ ಮೊಬೈಲ್ ನಮಗೆ ಕೊರೋನಾವನ್ನೂ ತಂದೊಡ್ಡಬಹುದು. ಯಾಕೆಂದರೆ ನಾವು ಎಲ್ಲೆಲ್ಲೋ ಸ್ಪರ್ಶಿಸಿ, ಮೊಬೈಲ್ ನ್ನೂ ಸ್ಪರ್ಶಿಸುತ್ತೇವೆ. ಕೆಲವರಿಗೆ ಟಾಯ್ಲೆಟ್ ಗೆ ಹೋಗುವಾಗಲೂ ಮೊಬೈಲ್ ಜತೆಗೇ ಒಯ್ಯುವ ಖಯಾಲಿಯಿರುತ್ತದೆ.

ಹೀಗಾಗಿ ಮೊಬೈಲ್ ಎನ್ನುವುದು ವೈರಸ್ ನ ಬಹುಮುಖ್ಯ ಕೇಂದ್ರ ಎಂದು ಹಲವು ಅಧ್ಯಯನಗಳೇ ಹೇಳಿವೆ. ಹೀಗಾಗಿ ಕೊರೋನಾ ಇರುವ ಈ ಕಾಲದಲ್ಲಿ ಅಪ್ಪಿ ತಪ್ಪಿಯೂ ನಿಮ್ಮ ಮೊಬೈಲ್ ನ್ನು ಬೇರೆಯವರಿಗೆ ಕೊಡಬೇಡಿ. ಹಾಗೆಯೇ ನೀವೂ ಕೂಡಾ ಪ್ರತಿನಿತ್ಯ ಮೊಬೈಲ್ ಬಳಸಿದ ನಂತರ ಏನೇ ಸೇವನೆ ಮಾಡುವುದಿದ್ದರೂ ಚೆನ್ನಾಗಿ ಕೈ ತೊಳೆದುಕೊಳ್ಳಿ. ದಿನಕ್ಕೊಮ್ಮೆ ಸ್ಯಾನಿಟೈಸರ್ ಸಿಂಪಡಿಸಿ ಮೊಬೈಲ್ ಶುಚಿಗೊಳಿಸಿ. ಯಾವುದನ್ನೇ ಆದರೂ ನಿರ್ಲಕ್ಷಿಸುವ ಕಾಲ ಇದಲ್ಲ ಎಂಬುದನ್ನು ಮರೆಯಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ