ಕೊರೋನಾ ಮೂಲ ಅರಿಯಲು ಬಾವಲಿಗಳ ಬೇಟೆಯಾಡಿದರು!

ಗುರುವಾರ, 13 ಆಗಸ್ಟ್ 2020 (13:14 IST)
ಥೈಲ್ಯಾಂಡ್: ಕೊರೋನಾ ಬಾವಲಿಗಳ ಮೂಲಕ ಹರಡಿರಬಹುದೇ ಎಂಬ ಅನುಮಾನಗಳಿದ್ದವು. ಇದು ನಿಜವೇ ಎಂದು ಪತ್ತೆ ಮಾಡಲು ಥೈಲ್ಯಾಂಡ್ ನಲ್ಲಿ ವಿಜ್ಞಾನಿಗಳ ಗುಂಪೊಂದು ಕಾಡು ಮೇಡು ಸುತ್ತಿ ಬಾವಲಿಗಳ ಬೇಟೆಯಾಡಿದೆ.


ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡ ಕೊರೋನಾ ವೈರಸ್ ನ ಮೂಲ ಬಾವಲಿಗಳು ಎಂದು ಹಿಂದೆ ಶಂಕಿಸಲಾಗಿತ್ತು. ಆದರೆ ಇದು ನಿಜವಲ್ಲ ಎಂದೂ ಕೆಲವರು ಪ್ರತಿಪಾದಿಸುತ್ತಾರೆ. ಆದರೆ ನಿಜವೇನೆಂದು ತಿಳಿಯಲೇಬೇಕೆಂದು ಗುಹೆ, ಗುಡ್ಡಗಾಡುಗಳನ್ನು ಸುತಾಡಿದ ಥೈಲ್ಯಾಂಡ್ ನ ಸಂಶೋಧಕರು, ಬಾವಲಿ ಹಿಡಿಯುವ ಕೆಲಸ ಮಾಡಿದ್ದಾರೆ.

ಇನ್ನೀಗ ಸಂಶೋಧಕರು ತಾವು ಹಿಡಿದು ತಂದ ಬಾವಲಿಗಳ ಮೂಲಕ ನಿಜವಾಗಿ ವೈರಸ್ ಇವುಗಳಿಂದಲೇ ಹುಟ್ಟಿಕೊಂಡಿದೆಯೇ ಅಥವಾ ಇವುಗಳ ಮೂಲಕ ವೈರಸ್ ಇನ್ನೊಬ್ಬರಿಗೆ ಹರಡುತ್ತವೆಯೇ ಎಂದು ಪತ್ತೆ ಮಾಡಲಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ