ನಿಯಮಗಳು ಲೆಕ್ಕಕ್ಕೇ ಇಲ್ಲ: ನಾರ್ಮಲ್ ಆಗಿ ಓಡಾಡುತ್ತಿರುವ ವಾಹನ ಸವಾರರು

ಶನಿವಾರ, 9 ಮೇ 2020 (08:29 IST)
ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೇ ಬೆಂಗಳೂರು ಜನ ಕೊರೋನಾವನ್ನೇ ಮರೆತು ನಾರ್ಮಲ್ ಆಗಿ ಓಡಾಡುತ್ತಿದ್ದಾರೆ.



ಲಾಕ್ ಡೌನ್ 3 ರ ನಿಯಮಗಳ ಪ್ರಕಾರ ದ್ವಿಚಕ್ರ ವಾಹನಗಳಲ್ಲಿ ಒಬ್ಬ ಸವಾರ ಮತ್ತು ಕಾರಿನಲ್ಲಿ ಇಬ್ಬರಿಗೆ ಸಂಚರಿಸಲು ಅವಕಾಶವಿದೆ. ಆದರೆ ಬೆಂಗಳೂರಿನ ಹಲವೆಡೆ ಈ ನಿಯಮಗಳನ್ನೆಲ್ಲಾ ಗಾಳಿಗೆ ತೂರಲಾಗುತ್ತಿದೆ.

ದ್ವಿಚಕ್ರ ವಾಹನ ಸವಾರರು ಎಂದಿಂತೇ ಇಬ್ಬರು, ಇನ್ನು ಕೆಲವೆಡೆ ಮೂವರನ್ನೂ ಹೇರಿಕೊಂಡು ಸವಾರಿ ಮಾಡುತ್ತಿದ್ದಾರೆ. ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ ಎಂದಾದರೂ ಎಲ್ಲೂ ಸಾಮಾಜಿಕ ಅಂತರಗಳು ಪಾಲನೆಯಾಗದೇ ಇರುವುದು ವಿಪರ್ಯಾಸ. ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದರೂ ದಿನ ಕಳೆದಂತೇ ಜನರು ಇದನ್ನು ಮರೆತು ಓಡಾಡುತ್ತಿದ್ದಾರೆ ಎನ್ನುವುದು ಸತ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ