ಆಸ್ಟ್ರೇಲಿಯಾ ಮೇಲೆ ಸವಾರಿ ನೋಡಿದ ಮೇಲೆ ಇಂಗ್ಲೆಂಡ್ ಗೆ ಟೀಂ ಇಂಡಿಯಾ ಭಯ ಶುರು

ಶನಿವಾರ, 23 ಜನವರಿ 2021 (09:01 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ತಾರಾ ಕ್ರಿಕೆಟಿಗರ ಬಲವಿಲ್ಲದಿದ್ದರೂ ಟೀಂ ಇಂಡಿಯಾ ಅವರದೇ ನೆಲದಲ್ಲಿ ಅವರಿಗೆ ಸೋಲುಣಿಸಿದ ಪರಿ ನೋಡಿದ ಮೇಲೆ ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್ ಗೆ ನಡುಕ ಶುರುವಾಗಿದೆ.


ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಫೆಬ್ರವರಿ 5 ರಿಂದ ಸರಣಿ ಆಡಲಿದೆ. ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಭಾರತವನ್ನು ಅದರದ್ದೇ ನೆಲದಲ್ಲಿ ಸೋಲಿಸುವುದೇ ಸವಾಲಿನ ಕೆಲಸ ಎಂದಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರು ಅಜೇಯರು. ಅವರನ್ನು ಸೋಲಿಸುವುದು ಸುಲಭವಲ್ಲ ಎಂದು ಸ್ವಾನ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ