ನಾಳೆಯಿಂದ ಭಾರತ-ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್: ತಂಡದಲ್ಲಿ ಈ ಬದಲಾವಣೆ ಪಕ್ಕಾ

ಶುಕ್ರವಾರ, 25 ಡಿಸೆಂಬರ್ 2020 (09:13 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ದ್ವಿತೀಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈಗಾಗಲೇ ಮೊದಲ ಪಂದ್ಯವನ್ನು ಆಘಾತಕಾರಿಯಾಗಿ ಸೋತಿರುವ ಟೀಂ ಇಂಡಿಯಾ ಈ ಪಂದ್ಯಕ್ಕೆ ಗಮನಾರ್ಹ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.


ಈಗಾಗಲೇ ಪಿತೃತ್ವ ರಜೆ ಪಡೆದಿರುವ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ತೊರೆದಿದ್ದಾರೆ. ಅವರ ಸ‍್ಥಾನದಲ್ಲಿ ಅಜಿಂಕ್ಯಾ ರೆಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಇವರಲ್ಲದೆ ಆರಂಭಿಕ ಪೃಥ್ವಿ ಶಾ ತಂಡದಿಂದ ಹೊರಗುಳಿಯುವುದು ಬಹುತೇಕ ನಿಶ್ಚಿತವಾಗಿದೆ. ಕೊಹ್ಲಿ ಸ್ಥಾನಕ್ಕೆ ಕೆಎಲ್ ರಾಹುಲ್, ಶಾ ಸ್ಥಾನಕ್ಕೆ ಶಬ್ನಂ ಗಿಲ್ ಗೆ ಅವಕಾಶ ಸಿಗುವುದು ಬಹುತೇಕ ಖಾತ್ರಿಯಾಗಿದೆ. ಆದರೆ ಕಳಪೆ ಫಾರ್ಮ್ ನಲ್ಲಿರುವ ಹನುಮ ವಿಹಾರಿಗೆ ಕಡೆಯ ಅವಕಾಶ ನೀಡುವ ಸಾಧ‍್ಯತೆಯಿದೆ. ರವೀಂದ್ರ ಜಡೇಜಾ ಇನ್ನೂ ಸಂಪೂರ್ಣ ಫಿಟ್ ಆಗದೇ ಇರುವುದರಿಂದ ವಿಹಾರಿಗೆ ಅದೃಷ್ಟ ಖುಲಾಯಿಸುವ ನಿರೀಕ್ಷೆಯಿದೆ. ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ವೇಗಿ ಮೊಹಮ್ಮದ್ ಶಮಿ ಬದಲಿಗೆ ಯುವ ವೇಗಿ ಮೊಹಮ್ಮದ್ ಸಿರಾಜ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗಿನ ಜಾವ 5 ಗಂಟೆಗೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ