INDvsSA test: ಅಪರೂಪದ ದಾಖಲೆ ಮಾಡಿದ ಕೊಹ್ಲಿ, 146 ವರ್ಷಗಳಲ್ಲಿ ಇದೇ ಮೊದಲು!

ಶುಕ್ರವಾರ, 29 ಡಿಸೆಂಬರ್ 2023 (12:54 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋತರೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಎಲ್ಲರ ಗಮನ ಸೆಳೆದಿತ್ತು.

ಇಡೀ ತಂಡ ಕುಸಿದಿದ್ದಾಗ ಕೊಹ್ಲಿ ಎರಡನೇ ಇನಿಂಗ್ಸ್ ನಲ್ಲಿ ಏಕಾಂಗಿಯಾಗಿ ಹೋರಾಡಿ 76 ರನ್ ಸಿಡಿಸಿದ್ದರು. ಕೊಹ್ಲಿಯ ಈ ಸಾಧನೆಯ ಜೊತೆಗೆ ಅವರು ವಿಶೇಷವಾದ ದಾಖಲೆಯೊಂದನ್ನು ಮಾಡಿದ್ದಾರೆ.

ಏಳನೇ ಬಾರಿಗೆ ಒಂದೇ ಒಂದು ವರ್ಷದಲ್ಲಿ 2000 ರನ್ ಪೂರೈಸಿದ ದಾಖಲೆಯೊಂದನ್ನು ಕೊಹ್ಲಿ ಮಾಡಿದ್ದಾರೆ. ಇದಕ್ಕೆ ಮೊದಲು 2012, 2014, 2016, 2017, 2018, 2019 ರಲ್ಲಿ ಈ ಸಾಧನೆ ಮಾಡಿದ್ದರು.

ಇದೀಗ ಈ ವರ್ಷ ಮತ್ತೊಮ್ಮೆ 2000 ರನ್ ಪೂರೈಸುವ ಮೂಲಕ 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ದಾಖಲೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ