ಐಪಿಎಲ್ 2024: ಯಶಸ್ವಿ ಜೈಸ್ವಾಲ್ ಶತಕ ಗಳಿಸಿದಾಗ ಅಪ್ಪಿ ಸಂಭ್ರಮಿಸಿದ ರೋಹಿತ್ ಶರ್ಮಾ

Krishnaveni K

ಮಂಗಳವಾರ, 23 ಏಪ್ರಿಲ್ 2024 (11:44 IST)
Photo Courtesy: Twitter
ಜೈಪುರ: ಐಪಿಎಲ್ ನಲ್ಲಿ ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಬೇರೆ ಬೇರೆ ತಂಡದ ಪರ ಆಡಬಹುದು. ಆದರೆ ಇಬ್ಬರ ನಡುವಿನ ಬಾಂಧವ್ಯ ಮಾತ್ರ ಯಾವತ್ತೂ ಬೇರೆಯಾಗಲ್ಲ ಎನ್ನುವುದಕ್ಕೆ ನಿನ್ನೆಯ ರಾಜಸ್ಥಾನ್ ರಾಯಲ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ಪಂದ್ಯ ಸಾಕ್ಷಿಯಾಯಿತು.

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದರೆ ಜೈಸ್ವಾಲ್ ರಾಜಸ್ಥಾನ್ ಪರ ಆಡುತ್ತಾರೆ. ನಿನ್ನೆಯ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಬಹಳ ದಿನಗಳ ನಂತರ ಜೈಸ್ವಾಲ್ ಫಾರ್ಮ್ ಗೆ ಬಂದಿದ್ದರು. ಹೀಗಾಗಿ ಅವರ ಸಂಭ್ರಮ ಹೇಳತೀರದಾಗಿತ್ತು.

ಜೈಸ್ವಾಲ್ ಎಂದರೆ ರೋಹಿತ್ ಶರ್ಮಾ ಬೆಳೆಸಿದ ಹುಡುಗ ಎನ್ನಬಹುದು. ಟೀಂ ಇಂಡಿಯಾದಲ್ಲಿ ಜೈಸ್ವಾಲ್ ಗೆ ಅವಕಾಶ ಸಿಕ್ಕಲು ಕಾರಣ ರೋಹಿತ್. ತಮ್ಮ ಸಹೋದರನಂತೆ ರೋಹಿತ್ ಕಾಣುತ್ತಾರೆ. ಇದೀಗ ತಮ್ಮದೇ ತಂಡದ ವಿರುದ್ಧ ಜೈಸ್ವಾಲ್ ಶತಕ ಗಳಿಸಿದಾಗ ಎಲ್ಲರಿಗಿಂತ ಹೆಚ್ಚು ರೋಹಿತ್ ಸಂಭ್ರಮಿಸಿದ್ದಾರೆ.

ಜೈಸ್ವಾಲ್ ಶತಕ ಗಳಿಸುತ್ತಿದ್ದಂತೇ ಚಪ್ಪಾಳೆ ತಟ್ಟಿದ ರೋಹಿತ್ ಬಳಿಕ ಅವರ ಬಳಿ ಹೋಗಿ ಅಪ್ಪಿ ಅಭಿನಂದನೆ ಸಲ್ಲಿಸಿದ್ದಾರೆ. ಬಿಗ್ ಬ್ರದರ್ ರೋಹಿತ್ ರ ಅಪ್ಪುಗೆಯಿಂದ ಜೈಸ್ವಾಲ್ ಸಂಭ್ರಮವೂ ಹೆಚ್ಚಾಗಿದೆ. ಯುವ ಆಟಗಾರರಿಗೆ ರೋಹಿತ್ ಸದಾ ಪ್ರೋತ್ಸಾಹ ಕೊಡುತ್ತಾರೆ. ಅದರಲ್ಲೂ ತಮ್ಮ ನೀಲಿ ಕಣ್ಣಿನ ಹುಡುಗ ಭರ್ಜರಿ ಶತಕ ಗಳಿಸಿದಾಗ ಅವರ ಸಂಭ್ರಮ ಇನ್ನೂ ಹೆಚ್ಚಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ