ಐಪಿಎಲ್ 2024: ಅಂಪಾಯರ್ ಪ್ರಶ್ನಿಸಿದ ಸಂಜು ಸ್ಯಾಮ್ಸನ್ ಗೆ ಭಾರೀ ದಂಡ

Krishnaveni K

ಬುಧವಾರ, 8 ಮೇ 2024 (12:32 IST)
ದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದ ವೇಳೆ ತಮ್ಮ ಔಟ್ ತೀರ್ಪು ಪ್ರಶ್ನಿಸಿ ಮೈದಾನದಲ್ಲೇ ಅಂಪಾಯರ್ ಜೊತೆ ವಾಗ್ವಾದಕ್ಕಿಳಿದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಗೆ ಭಾರೀ ದಂಡ ಬಿದ್ದಿದೆ.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಸಂಜು ಹೊಡೆದ ಬಾಲ್ ನ್ನು ಫೀಲ್ಡರ್ ಹಿಡಿಯುವಾಗ ಬೌಂಡರಿ ಲೈನ್ ಟಚ್ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಟಿವಿ ರಿಪ್ಲೇಗಳಲ್ಲಿ ಈ ವಿಡಿಯೋಗಳು ಪ್ರಸಾರವಾಗಿದೆ. ಈ ವೇಳೆ ಸಂಜು 86 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಕೊನೆಯವರೆಗೆ ನಿಂತಿದ್ದರೆ ತಂಡ ಗೆಲ್ಲುತ್ತಿತ್ತು.

ಆದರೆ ಅಂಪಾಯರ್ ಔಟ್ ತೀರ್ಪು ನೀಡಿದ ತಕ್ಷಣ ಸಿಟ್ಟಿಗೆದ್ದ ಸಂಜು ಮೈದಾನದಲ್ಲಿದ್ದ ಅಂಪಾಯರ್ ಬಳಿ ಬಂದು ವಾಗ್ವಾದ ನಡೆಸಿದ್ದಾರೆ. ಇದರ ವಿರುದ್ಧ ಈಗ ಬಿಸಿಸಿಐ ಕ್ರಮ ಕೈಗೊಂಡಿದೆ. ಸಂಜು ಸ್ಯಾಮ್ಸನ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಅವರಿಗೆ 30 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ.

ಈ ಮೊದಲು ವಿರಾಟ್ ಕೊಹ್ಲಿಗೂ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಇದೇ ರೀತಿ ದಂಡ ವಿಧಿಸಲಾಗಿತ್ತು. ಕೊಹ್ಲಿ ತಮ್ಮ ಔಟ್ ತೀರ್ಪು ಪ್ರಶ್ನಿಸಿ ಅಂಪಾಯರ್ ಜೊತೆ ಮೈದಾನದಲ್ಲಿ ವಾಗ್ವಾದ ನಡೆಸಿದ್ದರು. ಇದೀಗ ಸಂಜು ಕೂಡಾ ಅದೇ ತಪ್ಪು ಮಾಡಿ ದಂಡ ತೆತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ