ಟೀಂ ಇಂಡಿಯಾ ವಿರುದ್ಧ ಏಕದಿನಕ್ಕೆ ನ್ಯೂಜಿಲೆಂಡ್ ಗೆ ನಾಯಕನೇ ಇಲ್ಲ!

ಮಂಗಳವಾರ, 4 ಫೆಬ್ರವರಿ 2020 (10:54 IST)
ವೆಲ್ಲಿಂಗ್ಟನ್: ಭಾರತದ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಏಕದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲು ನ್ಯೂಜಿಲೆಂಡ್ ಗೆ ನಾಯಕನೇ ಗೈರಾಗಲಿದ್ದಾರೆ.


ಟಿ20 ಸರಣಿ ವೇಳೆ ಗಾಯಗೊಂಡಿದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅಂತಿಮ ಎರಡು ಪಂದ್ಯದಲ್ಲಿ ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ವೇಗಿ ಟಿಮ್ ಸೌಥಿ ತಂಡವನ್ನು ಮುನ್ನಡೆಸಿದ್ದರು.

ಇದೀಗ ಗಾಯದಿಂದ ಚೇತರಿಸಿಕೊಳ್ಳದ ಕಾರಣ ವಿಲಿಯಮ್ಸನ್ ಮೊದಲ ಎರಡು ಏಕದಿನ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ. ಕೇನ್ ಕಿವೀಸ್ ತಂಡದ ಬ್ಯಾಟಿಂಗ್ ಆಧಾರ ಸ್ತಂಬವಾಗಿರುವುದರಿಂದ ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ. ಕೇನ್ ಅಂತಿಮ ಪಂದ್ಯದ ವೇಳೆಗೆ ಫಿಟ್ ಆಗಿ ತಂಡಕ್ಕೆ ಬರುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ