ಕೇಂದ್ರದ ಒಪ್ಪಿಗೆಯಿಲ್ಲದೇ ಭಾರತ-ಪಾಕ್ ಕ್ರಿಕೆಟ್ ಸರಣಿಯಿಲ್ಲ

ಗುರುವಾರ, 16 ಏಪ್ರಿಲ್ 2020 (09:56 IST)
ಮುಂಬೈ: ಕೊರೋನಾ ಪರಿಹಾರಕ್ಕೆ ದೇಣಿಗೆ ಸಂಗ್ರಹಿಸಲು ಭಾರತ-ಪಾಕ್ ನಡುವೆ ಕ್ರಿಕೆಟ್ ಸರಣಿ ನಡೆಯಲಿ ಎಂದು ಇತ್ತೀಚೆಗೆ ಪಾಕ್ ಕ್ರಿಕೆಟಿಗ ಶೊಯೇಬ್ ಅಖ್ತರ್ ಹೇಳಿಕೆ ನೀಡಿದ ಬೆನ್ನಲ್ಲೇ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿ ಬಗ್ಗೆ ಚರ್ಚೆ ಆರಂಭವಾಗಿತ್ತು.


ಭಾರತೀಯ ಮಾಜಿ ಕ್ರಿಕೆಟಿಗರು ಅನೇಕರು ಭಾರತ ಮತ್ತು ಪಾಕಿಸ್ತಾನ ನಡುವೆ ಈಗ ಕ್ರಿಕೆಟ್ ಸರಣಿ ಆಯೋಜಿಸುವ ಅಗತ್ಯವಿಲ್ಲವೆಂದೇ ಹೇಳಿದ್ದರು. ಈಗ ಬಿಸಿಸಿಐ ಕೂಡಾ ಅದನ್ನೇ ಹೇಳಿದೆ.

ಕೇಂದ್ರ ಸರ್ಕಾರದ ಅನುಮತಿಯಿಲ್ಲದೇ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಕ್ರಿಕೆಟ್ ಸರಣಿ ಆಯೋಜನೆ ಇಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಐಸಿಸಿಗೆ ಕೂಡಾ ನಮ್ಮ ಲಾಯರ್ ಮೂಲಕ ನಾವು ನಮ್ಮ ಸರ್ಕಾರದ ಅನುಮತಿಯಿಲ್ಲದೇ ಪಾಕ್ ವಿರುದ್ಧ ಆಡಲು ಸಾಧ‍್ಯವಿಲ್ಲ ಎಂದು ಮನವರಿಕೆ ಮಾಡಿದ್ದೇವೆ. ಮತ್ತೀಗ ಉಭಯ ದೇಶಗಳ ನಡುವಿನ ಸರಣಿ ಆಯೋಜಿಸುವ ವಿಚಾರ ಬರಲು ಹೇಗೆ ಸಾಧ್ಯ? ಎಂದು ಬಿಸಿಸಿಐ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ