ಭಯ್ಯಾ.. ನಂಗೂ ಒಂದು ಚಾನ್ಸ್ ಕೊಡ್ಸಿ ಎಂದು ರೋಹಿತ್ ಶರ್ಮಾ ಬೆನ್ನುಬಿದ್ದರಾ ಪೃಥ್ವಿ ಶಾ, ರಿಷಬ್ ಪಂತ್

Krishnaveni K

ಶನಿವಾರ, 27 ಏಪ್ರಿಲ್ 2024 (16:29 IST)
Photo Courtesy: Twitter
ನವದೆಹಲಿ: ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಐಪಿಎಲ್ ಪಂದ್ಯದ ವೇಳೆ ರೋಹಿತ್ ಶರ್ಮಾ ಜೊತೆಗೆ ರಿಷಬ್ ಪಂತ್, ಪೃಥ‍್ವಿ ಶಾ ಫನ್ನಿ ಕ್ಷಣಗಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೋಹಿತ್ ಶರ್ಮಾ ದೊಡ್ಡಣ್ಣನಂತೆ ಇಬ್ಬರ ಜೊತೆಗೂ ಮಸ್ತಿ ಮಾಡಿದ್ದಾರೆ. ಟಾಸ್ ಗೆ ಮುನ್ನ ಪೃಥ್ವಿ ಶಾರನ್ನು ನೋಡಿದ ರೋಹಿತ್ ಅವರನ್ನು ಬಾಚಿ ತಬ್ಬಿಕೊಂಡಿದ್ದಾರೆ. ಇಂದಿನ ಈ ಪಂದ್ಯದಿಂದ ಪೃಥ‍್ವಿ ಶಾರನ್ನು ಆಡುವ ಬಳಗದಿಂದ ಹೊರಗಿಡಲಾಗಿದೆ.

ಇನ್ನೊಂದೆಡೆ ಡೆಲ್ಲಿ ತಂಡದ ನಾಯಕ ರಿಷಬ್‍ ಪಂತ್ ಮತ್ತು ರೋಹಿತ್ ಶರ್ಮಾ ನಗು ನಗುತ್ತಾ ಮಾತನಾಡುವ ಫೋಟೋ ವೈರಲ್ ಆಗಿದೆ. ಇವೆರಡೂ ಫೋಟೋವನ್ನು ನೋಡಿದ ನೆಟ್ಟಿಗರು ಬಹುಶಃ ಇಬ್ಬರೂ ಟಿ20 ವಿಶ್ವಕಪ್ ತಂಡದಲ್ಲಿ ನನಗೆ ಚಾನ್ಸ್ ಕೊಡಿಸಿ ಎಂದಿ ಕೇಳುತ್ತಿರಬಹುದು ಎಂದು ತಮಾಷೆ ಮಾಡಿದ್ದಾರೆ.

ಇಂದು ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಘೋಷಣೆಯಾಗುವ ಸಾಧ್ಯತೆಯಿದೆ. ಈಗಾಗಲೇ ರೋಹಿತ್ ಶರ್ಮಾ ಜೊತೆಗೆ ಚರ್ಚಿಸಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಟೀಂ ಇಂಡಿಯಾ ಆಟಗಾರರ ಹೆಸರನ್ನು ಬಹುತೇಕ ಅಂತಿಮಗೊಳಿಸಿದೆ. ಇಂದು ಅಧಿಕೃತ ಘೋಷಣೆಯೊಂದೇ ಬಾಕಿ. ಎಲ್ಲರ ಕಣ್ಣೂ ರಿಷಬ್ ಪಂತ್ ಮೇಲಿದೆ. ಬಹಳ ತಿಂಗಳಿನ ನಂತರ ರಿಷಬ್ ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬಹುದೇ ಎಂಬುದು ಎಲ್ಲರ ಕುತೂಹಲವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ