ಟೀಂ ಇಂಡಿಯಾಗಾಗಿ ಖಾಲಿ ಮೈದಾನದಲ್ಲಿ ಪಂದ್ಯ ನಡೆಸಲು ರೆಡಿಯಾಗಿರುವ ದ.ಆಫ್ರಿಕಾ

ಶುಕ್ರವಾರ, 22 ಮೇ 2020 (09:25 IST)
ಮುಂಬೈ: ಕೊರೋನಾದಿಂದಾಗಿ ಜಾಗತಿಕವಾಗಿ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಈ ನಡುವೆ ಜುಲೈ ನಂತರ ನಡೆಯಲಿರುವ ಕ್ರೀಡಾ ಕೂಟಗಳ ಬಗ್ಗೆ ಕ್ರೀಡಾ ಸಂಸ್ಥೆಗಳು ಗೊಂದಲದಲ್ಲಿವೆ.


ಈ ನಡುವೆ ದ.ಆಫ್ರಿಕಾ ಕ್ರಿಕೆಟ್ ಸಂಸ್ಥೆ ಆಗಸ್ಟ್ ನಲ್ಲಿ ನಡೆಯಬೇಕಿರುವ ಟಿ20 ಸರಣಿಗೆ ಟೀಂ ಇಂಡಿಯಾ ತಮ್ಮ ದೇಶಕ್ಕೆ ಆಗಮಿಸಬಹುದು ಎಂಬ ನಿರೀಕ್ಷೆಯಲ್ಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಪಾಲ್ಗೊಳ್ಳಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲೂ ರೆಡಿ ಎಂದು ದ.ಆಫ್ರಿಕಾ ಕ್ರಿಕೆಟ್ ಸಂಸ್ಥೆ ಹೇಳಿದೆ.

ಒಂದು ವೇಳೆ ಭಾರತ ನಮ್ಮ ದೇಶಕ್ಕೆ ಪ್ರವಾಸ ಮಾಡುವುದಾದರೆ, ಖಾಲಿ ಮೈದಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಂದ್ಯ ನಡೆಸಲೂ ನಾವು ರೆಡಿ ಎಂದು ಆಫ್ರಿಕಾ ಕ್ರಿಕೆಟ್ ಸಂಸ್ಥೆ ಹೇಳಿದೆ. ಆದರೆ ಬಿಸಿಸಿಐ ಜುಲೈನಲ್ಲಿ ನಡೆಯಬೇಕಿರುವ ಲಂಕಾ ಪ್ರವಾಸದ ಬಗ್ಗೆಯೇ ಇನ್ನೂ ತೀರ್ಮಾನ ಕೈಗೊಂಡಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ