ಭಾರತ-ಆಸ್ಟ್ರೇಲಿಯಾ ಮಹಿಳಾ ಟೆಸ್ಟ್: ಭಾರತ ಗೆಲ್ಲಿಸಿದ ಕ್ವೀನ್ ಸ್ಮೃತಿ ಮಂಧನಾ

ಭಾನುವಾರ, 24 ಡಿಸೆಂಬರ್ 2023 (13:10 IST)
ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ಮಹಿಳೆಯರ ಟೆಸ್ಟ್ ಪಂದ್ಯವನ್ನು ಭಾರತ ವನಿತೆಯರು 8 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.

ಪಂದ್ಯದ ನಾಲ್ಕನೇ ದಿನವಾದ ಇಂದು ಗೆಲುವಿಗೆ ಕೇವಲ 75 ರನ್ ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲೇ ಶಫಾಲಿ ವರ್ಮ 4 ರನ್ ಗಳಿಗೆ ಔಟಾಗುವ ಮೂಲಕ ಆಘಾತ ನೀಡಿದರು. ಆದರೆ ಬಳಿಕ ಮಹಿಳಾ ಕ್ರಿಕೆಟ್ ನ ಕ್ವೀನ್ ಸ್ಮೃತಿ ಮಂಧನಾ ಚೊಚ್ಚಲ ಪಂದ್ಯವಾಡುತ್ತಿರುವ ರಿಚಾ ಘೋಷ್ ಜೊತೆ ಎಚ್ಚರಿಕೆಯ ಜೊತೆಯಾಟವಾಡಿದರು. ಈ ಜೋಡಿ 51 ರನ್ ಗಳ ಜೊತೆಯಾಟವಾಡಿದ ಬಳಿಕ ರಿಚಾ 13 ರನ್ ಗಳಿಸಿ ಔಟಾದರು.

ಆದರೆ ಆಗ ಭಾರತ ಸುರಕ್ಷಿತವಾಗಿತ್ತು. ಬಳಿಕ ಅನುಭವಿ ಜೆಮಿಮಾ ರೊಡ್ರಿಗಸ್ ಜೊತೆಗೂಡಿ ಸ್ಮೃತಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಅಂತಿಮವಾಗಿ ಬೌಂಡರಿ ಗಳಿಸುವ ಮೂಲಕ ಸ್ಮೃತಿ ಗೆಲುವಿನ ರನ್ ಸಿಡಿಸಿದರು. ಸ್ಮತಿ 38 ರನ್ ಗಳಿಸಿ ಅಜೇಯರಾಗುಳಿದರೆ ಜೆಮಿಮಾ 12 ರನ್ ಗಳಿಸಿ ಅಜೇಯರಾಗುಳಿದರು.

ಮೊದಲ ಇನಿಂಗ್ಸ್ ನಲ್ಲೂ ಜವಾಬ್ಧಾರಿಯುತ ಆಟವಾಡಿದ್ದ ಸ್ಮೃತಿ 74 ರನ್ ಗಳಿಸಿದ್ದರು. ಅಂತಿಮವಾಗಿ ಭಾರತ 2 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿತು. ಈ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಒಟ್ಟು 7 ವಿಕೆಟ್ ಕಬಳಿಸಿದ ಸ್ನೇಹ ರಾಣಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ