ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ಪಕ್ಕಾ: ವೇಳಾಪಟ್ಟಿ ಬಿಡುಗಡೆ

ಶುಕ್ರವಾರ, 29 ಮೇ 2020 (08:52 IST)
ಮುಂಬೈ: ಕೊರೋನಾದಿಂದಾಗಿ ಕ್ರಿಕೆಟ್ ಟೂರ್ನಿಗಳು ನಡೆಯುವುದೇ ಅನುಮಾನದಲ್ಲಿದೆ. ಹೀಗಿರುವಾಗ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಕೊಡುವ ಸುದ್ದಿಯೊಂದು ಬಂದಿದೆ.


ಅಕ್ಟೋಬರ್ ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡುವುದು ಪಕ್ಕಾ ಆಗಿದೆ. ಅಕ್ಟೋಬರ್ ನಲ್ಲಿ ಟಿ20 ಸರಣಿ ಮತ್ತು ಡಿಸೆಂಬರ್ ನಲ್ಲಿ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ಪ್ರವಾಸ ಬೆಳೆಸಲಿದೆ. ಅಕ್ಟೋಬರ್ 11 ರಿಂದ ಟಿ20 ಸರಣಿ, ಡಿಸೆಂಬರ್ 3 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.

ಅಕ್ಟೋಬರ್ 3 ರಿಂದ ಆರಂಭವಾಗುವ ಪ್ರವಾಸ ಜನವರಿ 17 ರವರೆಗೆ ಮುಂದುವರಿಯಲಿದೆ. ಈ ವೇಳೆ ಮೂರು ಟಿ20, ಟೆಸ್ಟ್ ಸರಣಿ ಬಳಿಕ 3 ಏಕದಿನ ಸರಣಿಯಲ್ಲಿ ಭಾರತ ಪಾಲ್ಗೊಳ್ಳಲಿದೆ. ಈ ಪಂದ್ಯಗಳು ಬ್ರಿಸ್ಬೇನ್, ಅಡಿಲೇಡ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ