ಭವಿಷ್ಯದಲ್ಲಿ ಆರ್ ಸಿಬಿ ಬಿಟ್ಟು ಬೇರೆ ತಂಡದಲ್ಲಿ ಆಡುವ ಕುರಿತು ವಿರಾಟ್ ಕೊಹ್ಲಿ ಹೇಳಿದ್ದೇನು?

ಮಂಗಳವಾರ, 19 ಮಾರ್ಚ್ 2019 (08:54 IST)
ಬೆಂಗಳೂರು: ಕಳೆದ ಏಳೆಂಟು ವರ್ಷಗಳಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಆಡುತ್ತಿರುವ ವಿರಾಟ್ ಕೊಹ್ಲಿಗೆ ಭವಿಷ್ಯದಲ್ಲಿ ಬೇರೆ ತಂಡದ ಕಡೆಗೆ ಹೋಗುವ ಯೋಜನೆಯಿದೆಯೇ?


ಈ ಬಗ್ಗೆ ಅವರೇ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ಆರ್ ಸಿಬಿ ಪರ ಆಡುತ್ತಾ ಕೊಹ್ಲಿಗೆ ಬೆಂಗಳೂರು ಎರಡನೇ ತವರು ಇದ್ದಂತೇ ಆಗಿದೆ. ಇಲ್ಲಿ ಆಡಿದ ಅನುಭವವೇ ನನಗೆ ಎಂದೆಂದಿಗೂ ಇರಲಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಒಂದು ವೇಳೆ ಭವಿಷ್ಯದಲ್ಲಿ ಬೇರೆ ತಂಡದ ಪರ ಆಡುತ್ತೀರಾ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಕೊಹ್ಲಿ ‘ಆರ್ ಸಿಬಿ ಬಿಟ್ಟು ಬೇರೆ ತಂಡದ ಬಗ್ಗೆ ಯೋಚನೆ ಮಾಡಲು ನನಗೆ ಸಾಧ‍್ಯವಿಲ್ಲ. ಬೇರೆ ತಂಡಕ್ಕೆ ಆಡುವ ಯೋಚನೆಯೂ ನನಗಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ