ಭಾರತದ ಮಹಿಳಾ ಕ್ರಿಕೆಟಿಗರಿಗೆ ಕೋಚ್ ಆಗಲು ಗ್ಯಾರಿ ಕಸ್ಟರ್ನ್ ನಿರಾಕರಿಸಿದ್ದೇಕೆ ಗೊತ್ತಾ?!

ಶುಕ್ರವಾರ, 21 ಡಿಸೆಂಬರ್ 2018 (09:29 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರನ್ನು ತಿದ್ದಿ, ಭಾರತೀಯ ಕ್ರಿಕೆಟ್ ನ್ನು ಯಶಸ್ಸಿನ ಉತ್ತುಂಗಕ್ಕೇರಿಸಲು ಪ್ರಧಾನ ಪಾತ್ರ ವಹಿಸಿದ್ದ ಕೋಚ್ ಗ್ಯಾರಿ ಕಸ್ಟರ್ನ್ ಇನ್ನೇನು ಮಹಿಳಾ ಕ್ರಿಕೆಟಿಗರಿಗೂ ಕೋಚ್ ಆಗುತ್ತಾರೆ ಎಂಬ ಸುದ್ದಿ ಹಬ್ಬಿತ್ತು. 


ನಿನ್ನೆ ಕಪಿಲ್ ದೇವ್ ನೇತೃತ್ವದ ಆಯ್ಕೆ ಸಮಿತಿ ಮಹಿಳಾ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ ನೇಮಕ ಮಾಡಲು ಸಂದರ್ಶನ ನಡೆಸಿತ್ತು. ಇವರಲ್ಲಿ ಟೀಂ ಇಂಡಿಯಾ ಮಾಜಿ ಕೋಚ್ ಗ್ಯಾರಿ ಕಸ್ಟರ್ನ್, ಹಾಲಿ ಕೋಚ್ ರಮೇಶ್ ಪೊವಾರ್ ಮತ್ತಿತರರು ಸಂದರ್ಶನ ಎದುರಿಸಿದ್ದರು.

ಅಂತಿಮವಾಗಿ ಗ್ಯಾರಿ ಕಸ್ಟರ್ನ್ ರ ಹೆಸರನ್ನು ಆಯ್ಕೆ ಸಮಿತಿ ಶಾರ್ಟ್ ಲಿಸ್ಟ್ ನಲ್ಲಿ ಸೇರ್ಪಡೆಗೊಳಿಸಿತ್ತು. ಅವರನ್ನೇ ಕೋಚ್ ಆಗಿ ಮಾಡಲು ಕಪಿಲ್ ದೇವ್ ನೇತೃತ್ವದ ಸಮಿತಿಗೆ ಭಾರೀ ಒಲವಿತ್ತು. ಆದರೆ ಗ್ಯಾರಿ ಸದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಅವರು ಮಹಿಳಾ ತಂಡಕ್ಕೆ ಕೋಚ್ ಆಗಬೇಕಾದರೆ ನಿಯಮದ ಪ್ರಕಾರ ಆರ್ ಸಿಬಿ ಹುದ್ದೆ ಬಿಡಬೇಕಾಗುತ್ತದೆ. ಹೀಗಾಗಿ ಅವರನ್ನು ಆರ್ ಸಿಬಿ ಕೋಚ್ ಹುದ್ದೆ ತೊರೆಯುವಂತೆ ಮನ ಒಲಿಸುವ ಪ್ರಯತ್ನ ನಡೆಯಿತು. ಆದರೆ ಟೀಂ ಇಂಡಿಯಾದ ಮಾಜಿ ಕೋಚ್ ಇದಕ್ಕೆ ಒಪ್ಪದೇ ಇದ್ದ ಕಾರಣಕ್ಕೆ ಅವರ ಬದಲಿಗೆ ಡಬ್ಲ್ಯು ವಿ ರಾಮನ್ ಅವರನ್ನು ಮಹಿಳಾ ತಂಡದ ಕೋಚ್ ಆಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ