ನ್ಯೂಜಿಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಪಡೆ ಸೋಲು ಅನುಭವಿಸುತ್ತಿರುವುದು ಇದೇ ಕಾರಣಕ್ಕೆ!

Krishnaveni K

ಮಂಗಳವಾರ, 25 ಫೆಬ್ರವರಿ 2020 (09:09 IST)
ವೆಲ್ಲಿಂಗ್ಟನ್: ಟೀಂ ಇಂಡಿಯಾಕ್ಕೆ ನ್ಯೂಜಿಲೆಂಡ್ ಪ್ರವಾಸ ಯಾವತ್ತೂ ಸುಲಭವಲ್ಲ. 2003 ರ ನ್ಯೂಜಿಲೆಂಡ್ ಸರಣಿಯನ್ನು ಮತ್ತೆ ನೆನಪಿಸುತ್ತಿದೆ ಈ ಪ್ರವಾಸ ಕೂಡಾ.


ಅಂದು ಗಂಗೂಲಿ ನೇತೃತ್ವದ ಟೀಂ ಇಂಡಿಯಾದಲ್ಲಿ ಘಟಾನುಘಟಿಗಳಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ನ್ಯೂಜಿಲೆಂಡ್ ನ ವೇಗದ ಪಿಚ್ ನಲ್ಲಿ ಸಂಪೂರ್ಣ ತಡವರಿಸಿದ್ದ ಭಾರತ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. ಆದರೆ ಇಂದಿಗೂ ಕಿವೀಸ್ ಪ್ರವಾಸದಲ್ಲಿ ಭಾರತ ಹೇಗೆ ಆಡಬೇಕೆಂದು ಪಾಠ ಕಲಿತಿಲ್ಲ.

ಇಂದಿನ ಟೀಂ ಇಂಡಿಯಾವಂತೂ ನ್ಯೂಜಿಲೆಂಡ್ ಪ್ರವಾಸವನ್ನು ಗಂಭೀರವಾಗಿ ಪರಿಗಣಿಸಿದಂತೆಯೇ ಇಲ್ಲ. ಕಠಿಣ ಪರಿಶ್ರಮವಿಲ್ಲ, ಸೋಲಿನ ಪರಾಮರ್ಶೆಯಿಲ್ಲ. ಜತೆಗೆ ಟೆಸ್ಟ್ ಆಡುವ ಸ್ಪೆಷಲಿಸ್ಟ್ ಗಳೂ ಇಲ್ಲದೇ ಟೀಂ ಇಂಡಿಯಾ ಸೊರಗಿದೆ. ಟೆಸ್ಟ್ ಕ್ರಿಕೆಟ್ ಹೇಗೆ ಆಡಬೇಕೆಂದು ತಿಳಿಯಬೇಕಾದರೆ ದ್ರಾವಿಡ್, ಲಕ್ಷ್ಮಣ್ ಅವರ ಇನಿಂಗ್ಸ್ ಗಳನ್ನು ಒಮ್ಮೆ ನೋಡಬೇಕು. ಅಂತಹ ತಾಳ್ಮೆ, ನಿಂತು ಪಿಚ್ ಪರಿಸ್ಥಿತಿ ನೋಡಿಕೊಂಡು ಆಡುವ ಆಟಗಾರರ ಕೊರತೆ ಇಂತಹ ಪ್ರವಾಸಗಳಲ್ಲೇ ಎದ್ದು ಕಾಣುತ್ತದೆ.

ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಪಿಚ್ ಗಳು ಇಂದು ಬ್ಯಾಟಿಂಗ್ ಗೆ ಅನುಕೂಲಕರವಾಗಿ ಬದಲಾಗಿದೆ. ಹೀಗಾಗಿ ಭಾರತಕ್ಕೆ ಈ ಪ್ರವಾಸಗಳು ಕಠಿಣವಾಗುತ್ತಿಲ್ಲ. ಆದರೆ ಇಂಗ್ಲೆಂಡ್, ನ್ಯೂಜಿಲೆಂಡ್ ಪಿಚ್ ಗಳು ಇಂದಿಗೂ ಹಳೆಯ ಛಾತಿ ಉಳಿಸಿಕೊಂಡಿದೆ. ಹೀಗಾಗಿ ಈ ಪಿಚ್ ಗಳಲ್ಲಿ ಇಂದಿಗೂ ಭಾರತ ಪರದಾಡುತ್ತಿದೆ. ಅದಕ್ಕೂ ಹೆಚ್ಚಾಗಿ ಐಪಿಎಲ್ ಮನಸ್ಥಿತಿಯ ಇಂದಿನ ಕ್ರಿಕೆಟಿಗರಿಗೆ ಈ ಪಿಚ್ ನಲ್ಲಿ ಆಡಲು ಕಷ್ಟವಾಗುತ್ತಿದೆ. ಬಹುಶಃ ಇದೇ ಕಾರಣಕ್ಕೇ ಭಾರತ ಇಲ್ಲಿ ಸೋಲುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ