ಆರ್ ಸಿಬಿಯಲ್ಲಿ ನಡೆಯಲಿದೆ ದೊಡ್ಡ ಬದಲಾವಣೆ: ವಿರಾಟ್ ಕೊಹ್ಲಿಗೇ ಶಾಕ್?!

ಗುರುವಾರ, 13 ಫೆಬ್ರವರಿ 2020 (10:20 IST)
ಬೆಂಗಳೂರು: ಸತತ ವೈಫಲ್ಯದಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್ ಗೆ ಮುನ್ನ ತಂಡದಲ್ಲಿ ಭಾರೀ ಬದಲಾವಣೆ ಮಾಡಲು ನಿರ್ಧರಿಸಿದೆ.


ಈಗಾಗಲೇ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಿಂದ, ವೆಬ್ ಸೈಟ್ ಗಳಿಂದ ಆರ್ ಸಿಬಿಯ ಲೋಗೋ ಕಿತ್ತು ಹಾಕಲಾಗಿದೆ. ಹೀಗಾಗಿ ಹೊಸ ಲೋಗೋ ತಯಾರಿಸುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ತಂಡದ ಹೆಸರಿನಲ್ಲೂ ಬದಲಾವಣೆಯ ಸಾಧ‍್ಯತೆಯಿದೆ ಎನ್ನಲಾಗಿದೆ. ಈಗಾಗಲೇ ವಿರಾಟ್ ಕೊಹ್ಲಿ ಬಳಿಯೂ ತಂಡದಲ್ಲಿ ಏನು ಬದಲಾವಣೆ ಬೇಕು ಎಂಬ ಅಭಿಪ್ರಾಯ ಕೇಳಿದೆ ಎನ್ನಲಾಗಿದೆ. ಈ ಮೂಲಕವಾದರೂ ಅದೃಷ್ಟ ಖುಲಾಯಿಸುತ್ತಾ ಎಂದು ಆರ್ ಸಿಬಿ ಪರೀಕ್ಷೆ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ