ದ.ಆಫ್ರಿಕಾದಲ್ಲಿರುವ ಟೀಂ ಇಂಡಿಯಾ ಕ್ರಿಕೆಟಿಗನಿಂದ ಪತ್ನಿಯಿಂದ ಸಿಕ್ತು ಗುಡ್ ನ್ಯೂಸ್!

ಮಂಗಳವಾರ, 2 ಜನವರಿ 2018 (08:58 IST)
ನವದೆಹಲಿ: ಟೀಂ ಇಂಡಿಯಾದ ಮತ್ತೊಬ್ಬ ವಾಲ್ ಎಂದೇ ಜನಪ್ರಿಯರಾಗಿರುವ ಕ್ರಿಕೆಟಿಗ ಚೇತೇಶ್ವರ ಪೂಜಾರ ಹೊಸ ವರ್ಷದ ಮೊದಲ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
 

ತಮ್ಮ ಟ್ವಿಟರ್ ಪೇಜ್ ನಲ್ಲಿ ಪೂಜಾರ ಹೊಸ ವರ್ಷದ ಮೊದಲ ದಿನವೇ ತನ್ನ ಪತ್ನಿ ಗರ್ಭಿಣಿ ಎನ್ನುವ ವಿಚಾರವನ್ನು ಪೂಜಾರ ಹೊರ ಹಾಕಿದ್ದಾರೆ. ತಾನು ಮತ್ತು ಪತ್ನಿ ಪೂಜಾ ಪಬಾರಿ ಅಪ್ಪ –ಅಮ್ಮನಾಗಿ ಬಡ್ತಿ ಹೊಂದಲಿದ್ದೇವೆ ಎಂದು ಪೂಜಾರ ಹೇಳಿಕೊಂಡಿದ್ದಾರೆ.

2013 ರಲ್ಲಿ ಇವರಿಬ್ಬರು ವಿವಾಹ ಮಾಡಿಕೊಂಡಿದ್ದರು. ಇದೀಗ ಪೂಜಾರ ಜತೆ ಪತ್ನಿ ಪೂಜಾ ಕೂಡಾ ದ. ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ