ಅಜಿಂಕ್ಯಾ ರೆಹಾನೆಗಾಗಿ ವಿಕೆಟ್ ತ್ಯಾಗ ಮಾಡಿದ ರಿಷಬ್ ಪಂತ್

ಶನಿವಾರ, 22 ಫೆಬ್ರವರಿ 2020 (09:16 IST)
ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್  ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅಜಿಂಕ್ಯಾ ರೆಹಾನೆ ಬೇಡದ ದಾಖಲೆ ಮಾಡಿದ್ದಾರೆ.


ಉತ್ತಮವಾಗಿ ಆಡುತ್ತಿದ್ದ ಪಂತ್ ಮತ್ತು ರೆಹಾನೆ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಲಕ್ಷಣ ತೋರಿದ್ದರು. ಆದರೆ ರೆಹಾನೆ ಚೆಂಡು ಹೊಡೆದಾಗ ರಿಷಬ್ ಮೊದಲೇ ನಾನ್ ಸ್ಟ್ರೈಕರ್ ಎಂಡ್ ನಿಂದ ಸಿಂಗಲ್ ಗಾಗಿ ಕೆಲವು ಹೆಜ್ಜೆ ಮುಂದೆ ಬಂದಿದ್ದರು. ಆದರೆ ಇದನ್ನು ಗಮನಿಸದ ರೆಹಾನೆ ಕ್ರೀಸ್ ನಲ್ಲೇ ಇದ್ದರು.

ಈ ವೇಳೆ ಕಿವೀಸ್ ಫೀಲ್ಡರ್ ಆಝಾದ್ ಪಟೇಲ್ ಬಾಲ್ ನ್ನು ಸ್ಟ್ರೈಕರ್ ಎಂಡ್ ಕಡೆಗೆ ಎಸೆಯಲು ಸಜ್ಜಾಗಿದ್ದರು. ಇದನ್ನು ಗಮನಿಸಿದ ರಿಷಬ್ ಉತ್ತಮವಾಗಿ ಆಡುತ್ತಿದ್ದ ರೆಹಾನೆಗಾಗಿ ವಾಪಸ್ ನಾನ್ ಸ್ಟ್ರೈಕರ್ ಎಂಡ್ ಕಡೆಗೆ ಓಡದೇ ಸ್ಟ್ರೈಕರ್ ಎಂಡ್ ಕಡೆಗೆ ಬಂದು ತಮ್ಮ ವಿಕೆಟ್ ನ್ನು ತ್ಯಾಗ ಮಾಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ರೆಹಾನೆ ಟೆಸ್ಟ್ ಕ್ರಿಕೆಟ್ ನಲ್ಲಿ ರನೌಟ್ ಒಂದಕ್ಕೆ ಕಾರಣರಾದ ಕುಖ್ಯಾತಿಗೆ ಒಳಗಾದರು. ಆದರೆ ರೆಹಾನೆ ಕೂಡಾ 46 ರನ್ ಗಳಿಸಿ ಔಟಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ