ಕೊಹ್ಲಿಗಿಂತ, ರೋಹಿತ್ ಉತ್ತಮ ಬ್ಯಾಟ್ಸ್ ಮನ್; ಹೀಗೆಂದು ಹೇಳಿದವರು ಯಾರು ಗೊತ್ತಾ...?

ಮಂಗಳವಾರ, 26 ಡಿಸೆಂಬರ್ 2017 (15:10 IST)
ನವದೆಹಲಿ: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸೀಮಿತ ಓವರ್ ಕ್ರಿಕೆಟ್ ನಲ್ಲಿ ನಾಯಕ ವಿರಾಟ್ ಕೊಹ್ಲಿಗಿಂತ ಉತ್ತಮ ಬ್ಯಾಟ್ಸ್ ಮನ್ ಎಂದು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಸಂದೀಪ್ ಪಾಟೀಲ್ ಹೇಳಿದ್ದಾರೆ.

'ಈಗ ಬ್ಯಾಟಿಗ್ ವಿಷಯದಲ್ಲಿ  ಕೊಹ್ಲಿಗಿಂತ ರೋಹಿತ್ ಶರ್ಮಾ ಮುಂದೆ ಇದ್ದಾರೆ. ವಿರಾಟ್ ಖಂಡಿತವಾಗಿಯೂ ಉತ್ತಮ ಬ್ಯಾಟ್ಸ್ ಮನ್ ಇದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಸೀಮಿತ  ಓವರ್ ಕ್ರಿಕೆಟ್ ನಲ್ಲಿ  ರೋಹಿತ್ ಉತ್ತಮ ಬ್ಯಾಟ್ಸ್ ಮನ್' ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.

ರೋಹಿತ್ ಶರ್ಮಾ ಇತ್ತೀಚೆಗೆ ಶ್ರೀಲಂಕಾ ವಿರುದ್ಧ  ಏಕದಿನ ಹಾಗೂ ಟ್ವಿಂಟಿ-20 ಸರಣಿಯಲ್ಲಿ ಹಲವು ಬ್ಯಾಟಿಂಗ್ ದಾಖಲೆಗಳನ್ನು ಮುರಿದಿದ್ದರು. ಕೊಹ್ಲಿ ಮದುವೆಯ ಸಂಭ್ರಮದಲ್ಲಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ