ಹಿಂದೂ ದೇವಾಲಯಕ್ಕೆ ತೆರಳಿ ದಿನಸಿ ನೀಡಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ

ಗುರುವಾರ, 14 ಮೇ 2020 (09:18 IST)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಆಗಾಗ ಭಾರತ ವಿರೋಧಿ ಕಾಮೆಂಟ್ ನಿಂದ ಟೀಕೆಗೊಳಗಾಗುತ್ತಾರೆ. ಆದರೆ ಇದೀಗ ಹಿಂದೂ ದೇವಾಲಯಕ್ಕೆ ತೆರಳಿ ಅಲ್ಲಿನ ಜನರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಪಾಕಿಸ್ತಾನದ ಹಿಂದೂ ದೇವಾಲಯವೊಂದಕ್ಕೆ ತೆರಳಿದ ಅಫ್ರಿದಿ ತಮ್ಮ ಫೌಂಡೇಷನ್ ವತಿಯಿಂದ ಅಗತ್ಯ ವಸ್ತುಗಳನ್ನು ದಾನ ಮಾಡಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಇದೇ ಅಫ್ರಿದಿಯ ಚ್ಯಾರಿಟಿ ಫೌಂಡೇಷನ್ ಗೆ ಧನ ಸಹಾಯ ಮಾಡಲು ಕೋರಿ ಟೀಕೆಗೊಳಗಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೊರೋನಾದಿಂದಾಗಿ ಪಾಕಿಸ್ತಾನದಲ್ಲೂ ಅನೇಕರ ಬದುಕು ಅತಂತ್ರವಾಗಿದೆ. ಹೀಗಾಗಿ ಅಫ್ರಿದಿ ತಮ್ಮ ಫೌಂಡೇಷನ್ ವತಿಯಿಂದ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಲೇ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ