ಕನ್ನಡಿಗ ಮನೀಶ್ ಪಾಂಡೆಗೆ ಪಾಕ್ ವೇಗಿ ಶೊಯೇಬ್ ಅಖ್ತರ್ ಕೊಟ್ಟ ಕಾಂಪ್ಲಿಮೆಂಟ್ ಏನು ಗೊತ್ತಾ?

ಬುಧವಾರ, 22 ಜನವರಿ 2020 (09:05 IST)
ಮುಂಬೈ: ಟೀಂ ಇಂಡಿಯಾದ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ಕನ್ನಡಿಗ ಬ್ಯಾಟ್ಸ್ ಮನ್ ಮನೀಶ್ ಪಾಂಡೆ ಬಗ್ಗೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೊಗಳಿದ್ದಾರೆ.


ಮನೀಶ್ ಕೆಳ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಶೊಯೇಬ್ ಅವರನ್ನು ದಿಗ್ಗಜ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿಗೆ ಹೋಲಿಕೆ ಮಾಡಿ ಹೊಗಳಿದ್ದಾರೆ.

‘ಕೊನೆಗೂ ಭಾರತ ತಂಡಕ್ಕೆ ಧೋನಿಯ ಉತ್ತರಾಧಿಕಾರಿ ಸಿಕ್ಕಿದ್ದಾರೆ. ಮನೀಶ್ ಧೋನಿಯ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದಾರೆ’ ಎಂದು ಸಂದರ್ಶನವೊಂದರಲ್ಲಿ ಶೊಯೇಬ್ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ