ವಿರಾಟ್ ಕೊಹ್ಲಿಯ ಡೈನಾಸರ್ ಅವತಾರ ಕಂಡಿರಾ?!

ಗುರುವಾರ, 21 ಮೇ 2020 (09:30 IST)
ಮುಂಬೈ: ಮೈದಾನದಲ್ಲಿ ಆಂಗ್ರಿ ಯಂಗ್ ಮ್ಯಾನ್ ಆಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲಿದ್ದಾಗ ಎಷ್ಟೆಲ್ಲಾ ಮೋಜು ಮಾಡುತ್ತಾರೆ ಎಂಬುದಕ್ಕೆ ಪತ್ನಿ ಅನುಷ್ಕಾ ಶರ್ಮಾ ಪ್ರಕಟಿಸಿರುವ ಲೇಟೆಸ್ಟ್ ವಿಡಿಯೋವೇ ಸಾಕ್ಷಿ.


ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯ ಫನ್ನಿ ವಿಡಿಯೋವೊಂದನ್ನು ಅನುಷ್ಕಾ ಪ್ರಕಟಿಸಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ. ಡೈನಾಸರ್ ರೀತಿಯಲ್ಲಿ ಹೆಜ್ಜೆ ಹಾಕುತ್ತಾ ಮನೆಯೊಳಗೆ ಬರುವ ವಿರಾಟ್ ಅವತಾರ ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಈ ವಿಡಿಯೋ ಜತೆಗೆ ‘ಮನೆಯೊಳಗೆ ಬರುವ ಡೈನಾಸರ್ ಒಂದನ್ನು ನೋಡಿದೆ’ ಎಂದು ಅನುಷ್ಕಾ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ