ಪೊಲೀಸರಿಗೆ ಧನ್ಯವಾದ ಸಲ್ಲಿಸಿದ ವಿರಾಟ್ ಕೊಹ್ಲಿ

ಶನಿವಾರ, 11 ಏಪ್ರಿಲ್ 2020 (09:34 IST)
ನವದೆಹಲಿ: ಕೊರೋನಾ ಲಾಕ್ ಡೌನ್ ವೇಳೆಯೂ ಮಾನವೀಯ ನೆಲೆಯಲ್ಲೂ ಉತ್ತಮ ಸೇವೆ ಸಲ್ಲಿಸುತ್ತಿರುವ ಪೊಲೀಸರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಧನ್ಯವಾದ ಸಲ್ಲಿಸಿದ್ದಾರೆ.


‘ಇಡೀ ದೇಶದಲ್ಲಿ ಪೊಲೀಸರ ಸೇವೆ ನಿಜಕ್ಕೂ ಅಭಿನಂದನಾರ್ಹ. ಈ ಕಷ್ಟದ ಸಮಯದಲ್ಲಿ ಕರ್ತವ್ಯ ಸಲ್ಲಿಸುವುದರ ಜತೆಗ ಅಗತ್ಯ ಜನರಿಗೆ ಆಹಾರ, ನೀರು ಪೂರೈಸುತ್ತಿರುವ ಪೊಲೀಸರ ಸೇವೆಗೆ ಧನ್ಯವಾದ’ ಎಂದು ಕೊಹ್ಲಿ ವಿಡಿಯೋ ಸಂದೇಶ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು ಕೊಹ್ಲಿ ವಿಡಿಯೋವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ‍ಪ್ರಕಟಿಸಿದ್ದು, ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ