ಈ ಪಿನ್ ನಂಬರ್ ಬಳಕೆದಾರರು ಎಚ್ಚರದಿಂದಿರಿ

ಶುಕ್ರವಾರ, 22 ಡಿಸೆಂಬರ್ 2017 (13:14 IST)
ಬೆಂಗಳೂರು: ಫೇಸ್ ಬುಕ್ ನಲ್ಲಿ ಡೇಟಾ ವಿಜ್ಞಾನಿ ನಿಕ್ ಬೆರ್ರಿ ಸಂಖ್ಯಾತ್ಮಕ ಪಾಸ್ ವರ್ಡ್ ಡೇಟಾ ಬೇಸ್ ಅನ್ನು ವಿಶ್ಲೇಷಿಸಿದಾಗ ಹೆಚ್ಚಿನವರು 1234, 1111 ಸಂಖ್ಯೆಗಳನ್ನು ಹೆಚ್ಚಾಗಿ ಬಳಸಿದ್ದು ತಿಳಿದು ಬಂದಿದೆ.


ಇತ್ತಿಚೆಗೆ ಹೆಚ್ಚಿನವರು ತಮ್ಮ ಕೆಲಸಗಳಿಗೆ ಕಾರ್ಡ್ ನ್ನೇ ಹೆಚ್ಚಾಗಿ ಬಳಸುತ್ತಿರುವುದರಿಂದ ಈ ನಂಬರ್ ಹೊಂದಿರುವ ಕಾರ್ಡನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಆದ ಕಾರಣ 1234 ಹಾಗು 1111 ಪಿನ್ ನಂಬರ್ ಹೊದಿರುವವರು ಕೂಡಲೆ ಅದನ್ನು ಬದಲಾಯಿಸಿಕೊಳ್ಳಿ.


ಈಗ ಹೆಚ್ಚಿನವರು ಪಿನ್ ನಂಬರ್ ಬಳಸುವಾಗ ಸುಲಭವಾಗಲಿ , ನೆನಪಲ್ಲಿ ಉಳಿಯಲಿ ಎಂದು ಈ ತರಹದ ಸುಲಭವಾಗಿರುವ ನಂಬರ್ ಗಳನ್ನು ಬಳಸುತ್ತಾರೆ. ಆದರೆ ಈ ನಂಬರ್ ಗಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದನ್ನು ಎಲ್ಲರೂ ಮನಗೊಂಡಿರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ