ಹೆಣ್ಣಿನ ಸ್ಥಾನಮಾನಗಳು ಆ ದಿನಕ್ಕೆ ಮಾತ್ರ ಸೀಮಿತವೇ?

ಬುಧವಾರ, 8 ಮಾರ್ಚ್ 2023 (07:29 IST)
ಅಂತರಾಷ್ಟ್ರೀಯ ಮಹಿಳಾ ದಿನವು ಮಹಿಳಾ ಹಕ್ಕುಗಳ ಚಳುವಳಿಯ ಪ್ರಮುಖ ಭಾಗವಾಗಿದೆ, ಇದು ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಮಹಿಳೆಯರ ವಿರುದ್ಧ ಹಿಂಸೆ ಮತ್ತು ನಿಂದನೆಯಂತಹ ವಿಷಯಗಳ ಬಗ್ಗೆ ವಿಶ್ವದ ಗಮನ ಸೆಳೆಯುತ್ತದೆ.

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳೆಯರ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಸಾಧನೆಗಳ ಆಚರಣೆಯಾಗಿಯೂ ಕೂಡ ನೋಡಲಾಗುತ್ತದೆ. ಮಹಿಳೆಯರಿಗೆ ಗೌರವ, ಮೆಚ್ಚುಗೆ ಮತ್ತು ಪ್ರೀತಿಯನ್ನು ತೋರ್ಪಡಿಸುವ ದಿನ ಇದಾಗಿದೆ. 

ಹೆಣ್ಣುಮಕ್ಕಳು ಅತೀ ನಾಜೂಕು. ಮಾತಾಡುವುದಕ್ಕೆ ಭಯ, ಹೊರಗಿನವರ ಜತೆ ಬೆರೆಯಲು ಆತಂಕ, ಯಾರು ಏನು ತಿಳಿದುಕೊಳ್ಳುವರೋ ಎಂಬ ದಿಗಿಲು, ಹೇಗೆ ತಮ್ಮನ್ನು ತಾವೇ ಬಂಧಿಸಿಕೊಂಡು ಬಿಟ್ಟಿರುತ್ತಾರೆ.

ಸಾಮಾನ್ಯವಾಗಿ ಈ ರೀತಿಯ ಹೆಣ್ಣುಮಕ್ಕಳಲ್ಲಿ ಕೀಳರಿಮೆ, ಆತ್ಮವಿಶ್ವಾಸ ಕಡಿಮೆ. ಮನೆಯಲ್ಲಿ ಅತೀ ಮುದ್ದು, ಸಿಕ್ಕಾಪಟ್ಟೆ ಕಡಿವಾಣ ಹಾಕಿದಾಗಲೂ ಈ ರೀತಿಯ ಮನಸ್ಥಿತಿ ಬೆಳೆಯುತ್ತದೆ. ಈ ರೀತಿಯ ಹೆಂಗಸರಿಗೆ ಗಂಡ, ಸಂಸಾರ, ಅತ್ತೆಮನೆಯವರು ಎಂದರೆ ದೇವರ ಸಮಾನ. ತಮ್ಮನ್ನು ಉದ್ಧಾರ ಮಾಡಲು ಬಂದಿರುವ ದೇವಲೋಕದವರು ಎಂಬ ಭಾವನೆ. ಈಗಿನ ಕಾಲದಲ್ಲಿ ಇಂತಹ ಮುಗ್ಧ(ಪೆದ್ದು?)ಹೆಣ್ಣುಗಳು ವಿರಳ.

ಇನ್ನು ಕೆಲವು ಹೆಣ್ಣುಗಳು , ಫೆಮಿನಿಸಂ ಇತ್ಯಾದಿ ಹೆಸರಿನಲ್ಲಿ ಸ್ವತಂತ್ರ ಹಾಗೂ ಸ್ವೇಚ್ಛೆಯ ವ್ಯತ್ಸಾಸ ತಿಳಿಯದೆ, ಸಮಾನತೆ ಬೇಕು ಎಂದು ವಿರಸವೇ ಮೈ ಮೇಲೆ ಎಳೆದುಕೊಳ್ಳುತ್ತಾ ಬದುಕುತ್ತಾರೆ. ಮದುವೆ, ಗಂಡ, ಸಂಸಾರ ಇವರ ಪಾಲಿಗೆ ಬಂಧನ, ಹಿಂಸೆ. ತಮ್ಮ ಜೀವನಕ್ಕೆ ಅವು ಅನಿವಾರ್ಯ ಅಲ್ಲವೇ ಅಲ್ಲ ಎಂದು ತಮಗೆ ತಾವೇ ಹೇಳಿಕೊಳ್ಳುತ್ತಾ, ಅದೇ ಸರಿಯೆಂದು ಸಾಬೀತು ಮಾಡಲು ಹೆಣಗುತ್ತಾರೆ.

ಹೆಣ್ಣು ಅಬಲೆ ಅಥವಾ ಸಬಲೆ ಆಗುವುದು ಯಾವಾಗ? ಅದರಲ್ಲೂ ಅವಳು ದುರ್ಬಲಳಾಗುವುದು ಯಾವಾಗ? ತನ್ನ ಕುಟುಂಬ, ತವರು, ಮಕ್ಕಳು ಅವಳಿಗೆ ಜೀವ. ವೃತ್ತಿಯಲ್ಲಿ ಎಷ್ಟೇ ಮೇಲೆ ಏರಿದರೂ ಅವಳಿಗೆ ತನ್ನ ಸಂಸಾರದ ಚಿಂತೆ ಇದ್ದೇ ಇರುತ್ತದೆ.

ತಾನು ಒಳ್ಳೆಯ ಮಗಳು, ಸೊಸೆ, ಹೆಂಡತಿ ಆಗದಿದ್ದರೂ ಪರವಾಗಿಲ್ಲ, ಒಳ್ಳೆಯ ತಾಯಿ ಆಗಬೇಕು ಎಂದು ಎಲ್ಲಾ ಹೆಣ್ಣುಗಳಿಗೆ ಆಸೆ. ಈ ನಿಟ್ಟಿನಲ್ಲಿ ಬಹಳ ಹೆಂಗಸರು ತಮ್ಮ ವೃತ್ತಿಯನ್ನು ತ್ಯಾಗ ಮಾಡಿದ್ದೂ ಇದೆ. ಅಥವಾ ಸಂಸಾರಕ್ಕಾಗಿ ಬರುವ ಭಡ್ತಿಗಳನ್ನು ನಿರಾಕರಿಸಿ, ಕಡಿಮೆ ದರ್ಜೆಯಲ್ಲಿ ಇರುವ ಉದಾಹರಣೆಗಳೂ ಇವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ