ಸಿಟಿ ಮಂದಿಯಲ್ಲಿ ಹೆಚ್ಚಾದ ಗೊರಕೆ ಸಮಸ್ಯೆ

geetha

ಶನಿವಾರ, 13 ಜನವರಿ 2024 (21:00 IST)
ಬೆಂಗಳೂರು- ನಗರದಲ್ಲಿ ಇತ್ತೀಚೆಗೆ ಗೊರಕೆ ಹೊಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ವೈದ್ಯರು ಶಾಕಿಂಗ್ ಮಾಹಿತಿ ನೀಡಿದ್ದಾರೆ.ನಿತ್ಯ ಗೊರಕೆ ಹೊಡೆಯುವ ಅಭ್ಯಾಸದಿಂದ ಸುತ್ತ-ಮುತ್ತಲಿನ ಜನರಿಗೂ ಸಮಸ್ಯೆಯಾಗಲಿದೆ.ಗೊರಕೆಯ ಕಿರಿಕಿರಿಗೆ ಜೊತೆಯಲ್ಲಿ ಮಲಗುವವರ ಪಾಡು ಹೇಳತೀರದಾಗಿದೆ.
 
ಅಂದಾಂಗೆ ನಗರದಲ್ಲಿ ಕೋವಿಡ್ ಸೋಂಕಿನ  ಪರಿಣಾಮದಿಂದ ಗೊರಕೆ ಹೆಚ್ಚಾಗ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಬೆಂಗಳೂರಿನ ಜನರಲ್ಲಿ ಗೊರಕೆ ಸಮಸ್ಯೆ  ಹೆಚ್ಚಾಗುತ್ತಿರುವ ಬಗ್ಗೆ ಈಗ ವರದಿಯಾಗಿದೆ. ಕೊರೊನಾ ಬಳಿಕ ರಾಜಧಾನಿ ಬೆಂಗಳೂರಿನ  ಶೇ 30 ರಷ್ಟು ಜನರಲ್ಲಿ ಗೊರಕೆ ಸಮಸ್ಯೆ ಕಾಣಿಸಿದೆ. ಇದು ಗೊರಕೆಗಷ್ಟೇ ಸೀಮಿತವಾಗದೆ, ಹೃದಯ ಸಮಸ್ಯೆ ಹಾಗೂ ಹೃದಯಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ