ಮೂಗಿನಿಂದಲೇ ಉಸಿರಾಡಿದರೆ ಲಾಭವೇನು ಗೊತ್ತಾ?

ಶುಕ್ರವಾರ, 26 ಅಕ್ಟೋಬರ್ 2018 (09:25 IST)
ಬೆಂಗಳೂರು: ಉಸಿರಾಡುವುದು ಮೂಗಿನಲ್ಲೇ ಅಲ್ವಾ ಎಂದು ಪ್ರಶ್ನೆ ನಿಮಗೆ ಮೂಡಬಹುದು. ಹಾಗಿದ್ದರೂ ಕೆಲವೊಮ್ಮೆ ಬಾಯಿಯ ಮೂಲಕ ಗಾಳಿ ಒಳಗೆ ಎಳೆದುಕೊಳ್ಳುವ ಕೆಲಸ ಮಾಡುತ್ತೇವೆ.

ಆದರೆ ಮೂಗಿನ ಮೂಲಕವೇ ಉಸಿರಾಡುವುದು ಆರೋಗ್ಯಕ್ಕೆ ಎಷ್ಟು ಲಾಭದಾಯಕ ಗೊತ್ತಾ? ಶುದ್ಧ ಗಾಳಿ ನಮ್ಮ ಶ್ವಾಸಕೋಶ ಸೇರಲು ಮಾತ್ರವಲ್ಲ, ಮೂಗಿನ ಮೂಲಕ ಉಸಿರಾಡುವುದರಿಂದ ನಮ್ಮ ಸ್ಮರಣ ಶಕ್ತಿಯೂ ಹೆಚ್ಚುತ್ತದಂತೆ!

ಹಾಗಂತ ಅಧ್ಯಯನವೊಂದು ಹೇಳಿದೆ. ಮೂಗಿನ ಮೂಲಕ ಶ್ವಾಸ ತೆಗೆದುಕೊಳ್ಳುವುದರಿಂದ ದೈನಂದಿನ ಜೀವನದಲ್ಲಿ ನಾವು ಏನೆಲ್ಲಾ ಮಾಡಿದ್ದೇವೆ ಎಂಬುದು ಸುಲಭವಾಗಿ ಮೆದುಳಿನ ಸ್ಮರಣ ಶಕ್ತಿ ಭಾಗಕ್ಕೆ ತಲುಪುತ್ತದೆ ಎನ್ನುವುದು ಅಧ್ಯಯನಕಾರರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ