ಕಾಫಿ ಕುಡಿಯುವುದರಿಂದ ಮೆದುಳಿಗೆ ಎಂಥಾ ಲಾಭವಿದೆ ಗೊತ್ತಾ?

ಗುರುವಾರ, 8 ನವೆಂಬರ್ 2018 (07:48 IST)
ಬೆಂಗಳೂರು: ಕಾಫಿ ಹೆಚ್ಚು ಕುಡಿಯಬೇಡ ಎಂದು ಯಾರಾದರೂ ಹೇಳಿದರೆ ತಲೆಕೆಡಿಸಿಕೊಳ್ಳಬೇಡಿ. ಕಾಫಿಯಲ್ಲಿ ಮೆದುಳಿನ ಆರೋಗ್ಯ ಕಾಪಾಡುವ ಅಂಶವಿದೆ ಎನ್ನುವುದನ್ನು ನೂತನ ಅಧ್ಯಯನವೊಂದು ಹೊರ ಹಾಕಿದೆ.

ಕಾಫಿಯಲ್ಲಿರುವ ಅಂಶ ನಮ್ಮ ಮೆದುಳಿನ ಆಲೋಚನಾ ಶಕ್ತಿಯನ್ನು ಚುರುಕುಗೊಳಿಸುತ್ತದೆ ಎಂದು ಬ್ರಿಟನ್ ನ ಸಂಶೋಧಕರು ಕಂಡುಕೊಂಡಿದ್ದಾರೆ.

ಅಲ್ಲದೆ, ಕಾಫಿಯಲ್ಲಿ ಮೆದುಳಿಗೆ ಸಂಬಂಧಿಸಿದ ಮರೆವಿನ ಖಾಯಿಲೆಯಂತಹ ಸಮಸ್ಯೆಯನ್ನು ದೂರ ಮಾಡುತ್ತದೆ. ಆದರೆ ಕಾಫಿಯಲ್ಲಿರುವ ಯಾವ ಅಂಶ ಈ ಕೆಲಸ ಮಾಡುತ್ತದೆ ಎನ್ನುವುದರ ಬಗ್ಗೆ ಅಧ್ಯಯನಕಾರರು ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ