ಕೊರೋನಾ ಭೀತಿ: ಮನೆಯಲ್ಲೇ ಇದ್ದು ಮಾನಸಿಕ ಖಿನ್ನತೆಯಾಗುತ್ತಿದೆಯಾ? ಹೀಗೆ ಮಾಡಿ

ಶುಕ್ರವಾರ, 27 ಮಾರ್ಚ್ 2020 (09:32 IST)
ಬೆಂಗಳೂರು: 21 ದಿನಗಳ ಕಾಲ ದೇಶವಿಡೀ ಲಾಕ್ ಡೌನ್. ಹೀಗಾಗಿ ಎಲ್ಲೂ ಮನೆಯಿಂದ ಹೊರ ಹೋಗುವಂತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಏಕಾಂಗಿಯಾಗಿದ್ದರಂತೂ ಮಾನಸಿಕವಾಗಿ ಖಿನ್ನತೆಗೊಳಗಾಗುವುದು ಖಚಿತ. ಖಿನ್ನತೆಗೊಳಗಾಗದಂತೆ ಏನೆಲ್ಲಾ ಮಾಡಬಹುದು?


ಮನೆಯೊಳಗೇ ಇದ್ದು ಇದ್ದೂ ಬೇಜಾರಾದರೆ ಜೈಲಿನಲ್ಲಿ ಬಂಧಿಯಾದ ಅನುಭವವಾಗುವುದು ಸಹಜ. ಇದಕ್ಕಾಗಿ ಈ ಸಮಯದಲ್ಲಿ ಆದಷ್ಟು ಸುಮ್ಮನೇ ಕೂರಬೇಡಿ. ಹಾಗೆಯೇ ವಿಪರೀತ ಕೊರೋನಾ ಬಗ್ಗೆಯೇ ಚಿಂತೆ ಮಾಡುತ್ತಿದ್ದರೂ ಮನಸ್ಸು ವಿಪರೀತ ಅತಂಕ್ಕೀಡಾಗುವುದು ಸಹಜ.

ಹೀಗಾಗಿ ಆದಷ್ಟು ನಿಮ್ಮ ಪ್ರೀತಿ ಪಾತ್ರರೊಂದಿಗೆ ಫೋನ್ ಮೂಲಕವಾದರೂ ಮಾತನಾಡುತ್ತಿರಿ. ಹೇಗಿದ್ದರೂ ಇಂಟರ್ನೆಟ್ ಕಡಿತಗೊಂಡಿಲ್ಲ. ಹೀಗಾಗಿ ನಿಮ್ಮ ಇಷ್ಟದ ಹಾಡು, ಸಿನಿಮಾಗಳನ್ನು ವೀಕ್ಷಿಸುತ್ತಿರಿ. ನಿಮ್ಮ ಹಳೆಯ ಫೋಟೋ ಆಲ್ಬಂ, ವಿಡಿಯೋಗಳನ್ನು ನೋಡಿ ಖುಷಿಪಡಿ.

ಬೇಸರ ಕಳೆಯಲು ಮನೆ ಕೆಲಸ ಮಾಡಿ. ಹೊಸ ಅಡುಗೆ ಟ್ರೈ ಮಾಡಿ. ಅದೇ ರೀತಿ ಕೆಲ ಹೊತ್ತು ದೇವರ ಧ್ಯಾನಕ್ಕೆ ಮೀಸಲಿಡಿ. ಒಂದು ವೇಳೆ ವರ್ಕಿಂಗ್ ಹೋಂ ಮಾಡುತ್ತಿದ್ದರೂ ದಿನವಿಡೀ ಕೆಲಸದಲ್ಲಿ ಮುಳುಗದೇ ನಿಯಮಿತವಾಗಿ ಬ್ರೇಕ್ ತೆಗೆದುಕೊಳ್ಳುತ್ತಿರಿ.  ಜತೆಗೆ ಮನೆಯೊಳಗೇ ಆಡುವಂತಹ ಆಟವಾಡಿ. ಇನ್ನೂ ಮುಖ್ಯವಾಗಿ ಹೊತ್ತು ಗೊತ್ತು ನೋಡಲು ಹೋಗಬೇಡಿ. ನಿಮಗೆ ಮನಸ್ಸಾದಾಗ ಒಂದು ಒಳ್ಳೆಯ ನಿದ್ರೆ ಮಾಡಿ. ಇದರಿಂದ ಮನಸ್ಸೂ ಹಗುರವಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ