ಕಾಮದಾಟದಲ್ಲಿ ಅತೀ ಆತ್ಮವಿಶ್ವಾಸ ಒಳ್ಳೆಯದಲ್ಲ

ಶನಿವಾರ, 29 ಫೆಬ್ರವರಿ 2020 (17:09 IST)
ಲೈಂಗಿಕತೆ ಹಾಗೂ ಕಾಮದ ವಿಷಯದಲ್ಲಿ ಅದು ಎಷ್ಟೇ ತಿಳಿದುಕೊಂಡಿದ್ದರೂ ಸಹ ಮೊದ ಮೊದಲು ಆತಂಕ, ನಾಚಿಕೆ, ಗಾಬರಿ ಸಹಜವಾಗಿರುತ್ತದೆ.
 

ಮಹಿಳೆಯರ ಕೆಲ ತಪ್ಪು ಗ್ರಹಿಕೆ ಅವರ ಲೈಂಗಿಕ ಜೀವನಕ್ಕೆ ತೊಂದರೆಯಾಗಬಾರದು. ಕಾಮಕ್ರೀಡೆಯಲ್ಲಿ ಇನ್ನಷ್ಟು ಪಳಗಿ, ಪುರುಷರ ಮನೋಕಾಮನೆ ತೀರಿಸಲು ಈ ಟಿಪ್ಸ್ ಅನುಕೂಲವಾಗಬಹುದು.

ಮುಚ್ಚಿಟ್ಟಷ್ಟು ಕುತೂಹಲ ಜಾಸ್ತಿ ತೆರೆದಷ್ಟು ನಿರ್ಲಕ್ಷ ಜಾಸ್ತಿ ಎಂಬ ದೊಡ್ಡವರ ಹೇಳಿಕೆ ಪುರುಷರ ಪಾಲಿಗಂತೂ ಸತ್ಯ. ಮಹಿಳೆ ತನ್ನ ಸ್ತನ, ನಿತಂಬಗಳನ್ನು ಆಕರ್ಷಕವಾಗಿ ತೋರಿಸುವ ಪರಿಗೆ ಪುರುಷ ಸೋತು ಹೋಗಿರುತ್ತಾನೆ. ಸ್ಟ್ರಿಪ್ ಮಾಡುವ ಕಲೆ ವಿದೇಶದಲ್ಲಿ ಹೆಚ್ಚಾದರೂ, ನಮ್ಮಲ್ಲಿ ಕೂಡಾ ಕಾಮಕೇಳಿಗೂ ಮುನ್ನ ಬಟ್ಟೆ ಕಳಚುವ ಕ್ರಿಯೆ ಆಕರ್ಷಕವೂ ಹಾಗೂ ಉತ್ತೇಜನಕಾರಿಯಾಗಿಯೂ ಬೆಳೆಯುತ್ತಿದೆ.

ಪುರುಷರ ಅತಿ ಕಲ್ಪನೆಯಲ್ಲಿ ಮಹಿಳೆಯರು ವಸ್ತ್ರ ಕಳಚುವ ಕ್ರಿಯೆ ಪ್ರಧಾನ ಕನಸಾಗಿರುತ್ತದೆ. ಒಂದೊಂದೆ ಬಟ್ಟೆ ಕಳಚಿದಂತೆ ಪುರುಷನ ಕಾಮನೆ ಹೆಚ್ಚಾಗುತ್ತದೆ. ಅದರಲ್ಲೂ ಪ್ರಚೋದನಕಾರಿಯಾಗಿ ಒಳ ಉಡುಪು ಧರಿಸುವ ಮಹಿಳೆಯರ ಮೇಲೆ ಪುರುಷರ ಆಕರ್ಷಣೆ, ಕಲ್ಪನೆ ಹೆಚ್ಚು.

ದೇಹದ ಖಾಸಗಿ ಸ್ಥಳಗಳನ್ನು ಶುಚಿಗೊಳಿಸುವುದನ್ನು ಮರೆಯಬೇಡಿ. ಮೊದಲ ಸುಖಕ್ಕೂ ಮೊದಲು ಶುಚಿತ್ವ ಕೂಡಾ ಮಹತ್ವದ ಪಾತ್ರವಹಿಸುತ್ತದೆ. ಈ ಬಗ್ಗೆ ಪುರುಷನಿಗಿಂತ ಮಹಿಳೆಯೇ ಹೆಚ್ಚು ಮುತುವರ್ಜಿ ವಹಿಸುವುದು ಒಳ್ಳೆಯದು.

 ಕಾಮಪ್ರಕ್ರಿಯೆಯಲ್ಲಿ ಪುರುಷರೇ ಆತುರಗಾರರಾದರೂ, ನಿಮ್ಮ ಸಂಗಾತಿಯ ಮನ ಇಂಗಿತವನ್ನು ಅರಿತು, ಸಮಯಕ್ಕೆ ತಕ್ಕಂತೆ ಸ್ಪಂದಿಸುವಂತೆ ಮಾಡಿ. ವಿವಸ್ತ್ರಳಾಗುವ ಕಲೆ ಸಿದ್ಧಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ತೊಡಗುವ ಮುನ್ನ ಅತಿ ಹೆಚ್ಚು ನಾಚಿ, ಅತಿ ಬಿಗುಮಾನ, ಅತಿ ಆತ್ಮವಿಶ್ವಾಸ ಎಲ್ಲವೂ ಅನರ್ಥಕ್ಕೆ ಕಾರಣ.

  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ