ಪ್ರತಿದಿನ ವಾಲ್ ನಟ್ಸ್ ತಿಂದರೆ ಏನಾಗುತ್ತದೆ ಗೊತ್ತಾ?

ಶನಿವಾರ, 4 ಜನವರಿ 2020 (06:52 IST)
ಬೆಂಗಳೂರು : ಈಗಿನ ಕಾಲದಲ್ಲಿ ಯಾವುದೇ ಆಹಾರವು ನಮಗೆ ಪರಿಪೂರ್ಣವಾದ ಶಕ್ತಿಯನ್ನು ಕೊಡುವುದಿಲ್ಲ. ಹಾಗಾಗಿ ಪ್ರತಿನಿತ್ಯ ಡ್ರೈ ಪುಡ್ಸ್ ಗಳ ಸೇವನೆ ಮಾಡುವುದು ಉತ್ತಮ, ಅಂದಹಾಗೇ ವಾಲ್ ನಟ್ಸ್ ನ್ನು ಪ್ರತಿದಿನ ತಿಂದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.


ವಾಲ್ ನಟ್ ನ್ನು ಪ್ರತಿದಿನ ತಿನ್ನುವುದರಿಂದ ಇದರಲ್ಲಿರುವ ಪಾಲಿಫೀನಾಲ್ ಗಳು ಮೆದುಳಿನಲ್ಲಿ ನರಕೋಶಗಳ ಮಧ್ಯೆ ಸಂಪರ್ಕವನ್ನು ಸುಧಾರಿಸುತ್ತದೆ. ನೀವು ದಿನದಲ್ಲಿ ಕೆಲವೊಂದು ವಾಲ್ ನಟ್ಸ್ ಗಳನ್ನು ತಿಂದರೆ ನಿಮ್ಮ ಮೆದುಳಿನ ಶಕ್ತಿ ಶೇ.19ರಷ್ಟು ಹೆಚ್ಚಾಗುತ್ತದೆ. ಇದು ದೇಹದಲ್ಲಿರುವ ಬೇಡದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.
 

ಪ್ರತಿದಿನ ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ತಡೆಯುತ್ತದೆ ಮತ್ತು ಮೂಳೆಗಳು ದೃಢವಾಗುತ್ತದೆ. ಅಲ್ಲದೇ ಇದು ಸಕ್ಕರೆ ಕಾಯಿಲೆಯನ್ನು ನಿಯಂತ್ರಣಕ್ಕೆ ತರುತ್ತದೆ, ಕ್ಯಾನ್ಸರ್ ಬರದಂತೆ ತಡೆಯುತ್ತದೆ, ಗಂಡಸರಲ್ಲಿ ವೀರ್ಯ ವೃದ್ಧಿಯಾಗುವಂತೆ ಮಾಡುತ್ತದೆ, ಮಹಿಳೆಯರ ಋತುಚಕ್ರ ಸಮಸ್ಯೆಗಳು ನಿವಾರಣೆಯಾಗುತ್ತದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ